ಬೆಂಗಳೂರು : ಮಾ.31 ರೊಳಗೆ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಸರ್ಕಾರಿ ಆದೇಶದಲ್ಲಿ 2024-25 ನೇ ಸಾಲಿಗೆ ಸಂಬಂಧಿಸಿದ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸುವ ಅವಧಿಯನ್ನು ದಿ:25.03.2025 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿತ್ತು.
ಮುಂದುವರೆದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಎಲ್ಲಾ ವೇತನ, ಬಾಕಿ ವೇತನ ಮತ್ತು ವೇತನೇತರ (ಉ.ಶೀ:002- ಅಧಿಕಾರಿಗಳ ವೇತನ, 003- ಸಿಬ್ಬಂದಿ ವೇತನ, 011- ತುಟ್ಟಿ ಭತ್ಯೆ. 014- ಇತರೆ ಭತ್ಯೆಗಳು, 020- ವೈದ್ಯಕೀಯ ಭತ್ಯೆ, 021- ವೈದ್ಯಕೀಯ ವೆಚ್ಚಗಳ ಮರುಪಾವತಿ, 041- ಪ್ರಯಾಣ ವೆಚ್ಚಗಳು ಸೇರಿದಂತೆ) ಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ದಿ:29.03.2025 ರಂದು 2.30 ರವರೆಗೆ ಸ್ವೀಕರಿಸುವಂತೆ ತಿಳಿಸಿದೆ. ಈ ಸಂಬಂಧ ಎಲ್ಲಾ ಜಿಲ್ಲಾ ಖಜಾನಾಧಿಕಾರಿಗಳಿಗೆ ಸೂಚನೆ ನೀಡುವಂತೆ ತಿಳಿಸಲು ನಾನು ನಿರ್ದೇಶಿತನಾಗಿದ್ದೇನೆ ಎಂದು ಆದೇಶ ಹೊರಡಿಸಿದ್ದಾರೆ.
