ಚಿತ್ರದುರ್ಗ: ನಿವೃತ್ತ ನೌಕರರು ತಮ್ಮ ಪಿಂಚಣಿ ಮುಂದುವರೆಯಲು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿರುತ್ತದೆ.
ಈ ನಿಟ್ಟಿನಲ್ಲಿ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ, ಇಂಡಿಯನ್ ಪೊಸ್ಟ್ ಪೇಮೆಂಟ್ ಬ್ಯಾಂಕ್ ಸಹಯೋಗದಲ್ಲಿ ದೇಶ್ಯಾದ್ಯಂತ ವಿದ್ಯುನ್ಮಾನ ಜೀವನ್ ಪ್ರಮಾಣ ಪತ್ರ ಸಲ್ಲಿಕೆಗೆ ನವೆಂಬರ್ 1 ರಿಂದ 30 ವರೆಗೆ ಅಭಿಯಾನ ಹಮ್ಮಿಕೊಂಡಿದೆ.
ನವೆಂಬರ್ ತಿಂಗಳ 6, 14, 20, 27 ಮತ್ತು 30ನೇ ತಾರೀಖಿನಂದು ಚಿತ್ರದುರ್ಗ ಜಿಲ್ಲೆಯ ಪ್ರಧಾನ ಅಂಚೆ ಕಚೇರಿ ಸೇರಿದಂತೆ ಎಲ್ಲಾ ತಾಲ್ಲೂಕು ಅಂಚೆ ಕಚೇರಿಗಳಲ್ಲಿ ಮೇಳ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಪಿಂಚಣಿದಾರರು ಪಡೆದುಕೊಳ್ಳಬೇಕು ಎಂದು ಅಂಚೆ ಅಧೀಕ್ಷಕಿ ಉಷಾ.ಕೆ.ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.