
ಬೆಂಗಳೂರು: ರಾಜ್ಯಾದ್ಯಂತ ಸಬ್ ರಿಜಿಸ್ಟ್ರಾರ್ ಕಚೇರಿ ಅವಧಿಯನ್ನು ರಾತ್ರಿ 8 ಗಂಟೆವರೆಗೆ ವಿಸ್ತರಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಉಪನೋಂದಣಾಧಿಕಾರಿ ಕಛೇರಿಗಳು ಕಾರ್ಯನಿರ್ವಹಿಸಲಿವೆ. ಮಾರ್ಚ್ 31 ರವರೆಗೆ ರಾತ್ರಿ 8 ಗಂಟೆವರೆಗೆ ಕೆಲಸದ ವೇಳೆಯನ್ನು ವಿಸ್ತರಿಸಲಾಗಿದೆ.
ಸಾಮಾನ್ಯ ದಿನಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ ನೋಂದಣಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಈಗ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ. ಮಾರ್ಚ್ 26 ರ 4ನೇ ಶನಿವಾರ ಕೂಡ ಕಚೇರಿಗಳು ತೆರೆದಿರುತ್ತವೆ.
ರಾಜ್ಯದ ಎಲ್ಲಾ ವಿಧದ ಸ್ಥಿರಾಸ್ತಿ ನೋಂದಣಿಗೆ ಮಾರ್ಗಸೂಚಿ ತರದಲ್ಲಿ ಶೇಕಡ 10 ರಷ್ಟು ಕಡಿತಗೊಳಿಸಿದ್ದು, ಮಾರ್ಚ್ 31 ರವರೆಗೆ ಆದೇಶ ಜಾರಿಯಲ್ಲಿರುತ್ತದೆ. ವಿವಿಧ ಸ್ಥಿರಾಸ್ತಿಗಳ ನೋಂದಣಿಗೆ ಮುದ್ರಾಂಕ ಶುಲ್ಕ ನಿಗದಿಗೆ ಮಾರ್ಗಸೂಚಿ ದರದ ಶೇಕಡ 10ರಷ್ಟು ರಿಯಾಯಿತಿ ಆದೇಶ ಮಾರ್ಚ್ 31 ರವರೆಗೆ ಜಾರಿಯಲ್ಲಿದ್ದು, ನೋಂದಣಿಗೆ ಅನುಕೂಲವಾಗುವಂತೆ ಕಚೇರಿ ಅವಧಿ ವಿಸ್ತರಿಸಲಾಗಿದೆ.