ಖ್ಯಾತ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಇಂದು 42ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ವಿವಿಧ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಸಾಕಷ್ಟು ಹೆಸರು ಮಾಡಿದ್ದ ನಟ ಅಲ್ಲು ಅರ್ಜುನ್ ಇತ್ತೀಚಿಗೆ ತಮ್ಮ ‘ಪುಷ್ಪ’ ಚಿತ್ರದ ಮೂಲಕ ದೇಶದಲ್ಲೆಡೆ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ.
ಅಲ್ಲು ಅರ್ಜುನ್ 1985ರಲ್ಲಿ ತೆರೆಕಂಡ ‘ವಿಜೇತ’ ಚಿತ್ರದಲ್ಲಿ ಬಾಲ ಕಲಾವಿದನಾಗಿ ಅಭಿನಯಿಸುವ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. 2003ರಲ್ಲಿ ‘ಗಂಗೋತ್ರಿ’ ಸಿನಿಮಾದಲ್ಲಿ ಮೊದಲ ಬಾರಿ ನಾಯಕ ನಟನಾಗಿ ಕಾಣಿಸಿಕೊಂಡರು. ಬಳಿಕ ‘ಆರ್ಯ’, ‘ಬನ್ನಿ’, ‘ಹ್ಯಾಪಿ’ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ ಇವರು ತಮ್ಮ ಡ್ಯಾನ್ಸ್ ಮತ್ತು ವಿಭಿನ್ನ ಪಾತ್ರಗಳ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. 2021 ರಲ್ಲಿ ಕೊನೆಯದಾಗಿ ʼಪುಷ್ಪ ದಿ ರೈಸ್ʼ ನಲ್ಲಿ ಕಾಣಿಸಿಕೊಂಡಿದ್ದ ಅಲ್ಲು ಅರ್ಜುನ್ ಇದರ ಮುಂದುವರೆದ ಭಾಗ ʼಪುಷ್ಪ2ʼ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಇಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪುಷ್ಪ2 ಟೀಸರ್ ಯೂಟ್ಯೂಬಲ್ಲಿ ಬಿಡುಗಡೆಯಾಗಲಿದೆ.