ಚೆನ್ನೈ: ಕ್ರಿಶ್ಚಿಯನ್ ಧರ್ಮದ ವಿರುದ್ಧ ಅವಹೇಳನಕಾರಿ ಟ್ವೀಟ್ ಪೋಸ್ಟ್ ಮಾಡಿದ ಆರೋಪದ ಮೇಲೆ ತಮಿಳುನಾಡಿನ ಸೈಬರ್ ಕ್ರೈಂ ವಿಂಗ್ ತಮಿಳು ಸಿನಿಮಾ ಸ್ಟಂಟ್ ಕೊರಿಯೋಗ್ರಾಫರ್ ಕನಲ್ ಕಣ್ಣನ್ ಅವರನ್ನು ಬಂಧಿಸಿದೆ.
ಕ್ರಿಶ್ಚಿಯನ್ ಧರ್ಮದ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ್ದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಕನ್ಯಾಕುಮಾರಿಯಲ್ಲಿ ಸ್ಟಂಟ್ ಕೊರಿಯೋಗ್ರಾಫರ್ ಕನಲ್’ ಕಣ್ಣನ್ ಅವರನ್ನು ಬಂಧಿಸಿದ್ದಾರೆ.
ಡಿಎಂಕೆ ಐಟಿ ವಿಂಗ್‌ನ ಉಪ ಸಂಘಟಕ ಆಸ್ಟಿನ್ ಬೆನೆಟ್ ಅವರು ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಂ ವಿಂಗ್ ಪೊಲೀಸರು ಜುಲೈ 1 ರಂದು ಹಿಂದೂ ಪರ ಸಂಘಟನೆಯಾದ ಹಿಂದೂ ಮುನ್ನಾನಿ, ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕನಲ್ ಕಣ್ಣನ್ ಅವರು ಟ್ವಿಟ್ಟರ್‌ನಲ್ಲಿ ಪಾದ್ರಿಯೊಬ್ಬರು ಹುಡುಗಿಯೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸೈಬರ್ ಕ್ರೈಂ ಪೊಲೀಸರು ಕಣ್ಣನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಸೋಮವಾರ ಹಲವು ಗಂಟೆಗಳ ಕಾಲ ವಿಚಾರಣೆ ನಂತರ ಕಣ್ಣನ್ ಅವರನ್ನು ಬಂಧಿಸಲಾಯಿತು.
ಕಣ್ಣನ್ ಆಕ್ಷನ್ ಕೊರಿಯೋಗ್ರಾಫರ್ ಮತ್ತು ನಟ. ಅವರು ತಮಿಳು, ಮಲಯಾಳಂ, ತೆಲುಗು, ಕನ್ನಡ ಮತ್ತು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಅವರು ತಮ್ಮ ವೃತ್ತಿಜೀವನವನ್ನು 1991 ರಲ್ಲಿ ‘ಚೇರನ್ ಪಾಂಡಿಯನ್’. ತಮಿಳು ಸಿನಿಮಾದೊಂದಿಗೆ ಪ್ರಾರಂಭಿಸಿದರು. ಪ್ರಾದೇಶಿಕ ಸಿನಿಮಾದಲ್ಲಿ ಅವರ ಕೆಲಸಕ್ಕಾಗಿ ಅವರು 16 ಪ್ರಶಸ್ತಿಗಳನ್ನು ಪಡೆದಿದ್ದಾರೆ.