
ಹಳದಿ ಸಮಾರಂಭದ ಸಂದರ್ಭದಲ್ಲಿ, ಕತ್ರಿನಾ ಕೈಫ್ ಅವರು ದಂತವರ್ಣದ ಸಬ್ಯಸಾಚಿ ಲೆಹೆಂಗಾವನ್ನು ಧರಿಸಿದ್ದರು. ಕುತ್ತಿಗೆಗೆ ಹಾಗೂ ಕೈಗಳಿಗೆ ಹೂವಿನಾಭರಣಗಳಿಂದ ಅಲಂಕೃತಗೊಂಡಿದ್ದರು. ಇನ್ನು ಮದುಮಗ ವಿಕ್ಕಿ ಗುಲಾಬಿ ಬಣ್ಣದ ದುಪ್ಪಟ್ಟಾದಲ್ಲಿ ಅಂದವಾಗಿ ಕಾಣುತ್ತಿದ್ದಾರೆ. ಫೋಟೋವೊಂದರಲ್ಲಿ ಕತ್ರೀನಾ ವಿಕ್ಕಿ ಕೆನ್ನೆಗೆ ಅರಶಿನ ಹಚ್ಚುತ್ತಿರುವುದನ್ನು ಕಾಣಬಹುದು.
ಹಳದಿ ಶಾಸ್ತ್ರದ ಕೆಲವು ಸುಂದರ ಫೋಟೋಗಳನ್ನು ದಂಪತಿ ತಮ್ಮ ಇನ್ಸ್ಟಾಗ್ರಾಂ ಪುಟಗಳಲ್ಲಿ ಹಂಚಿಕೊಂಡಿದ್ದಾರೆ. ಹಳದಿ ಶಾಸ್ತ್ರದಲ್ಲಿ ಕತ್ರಿನಾ ಕೈಫ್ ಸಬ್ಯಸಾಚಿ ಲೆಹೆಂಗಾ ಧರಿಸಿದ್ದರು. ಕತ್ರೀನಾ ಧರಿಸಿದ್ದ ಆಭರಣಗಳು ಸಹ ಸಭ್ಯಸಾಚಿ ಅವರೇ ಡಿಸೈನ್ ಮಾಡಿರುವುದು.
ಸಬ್ಯಸಾಚಿ ಕೂಡ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಕತ್ರಿನಾ ಕೈಫ್ ಅವರ ಹಳದಿಯ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ವಿಕ್ಕಿ ಕೌಶಲ್ ಅವರು ತಮ್ಮ ಹಳದಿ ಸಮಾರಂಭದಲ್ಲಿ ಸಬ್ಯಸಾಚಿ ಕಸೂತಿ ಖಾದಿ ಕುರ್ತಾ ಮತ್ತು ಸಲ್ವಾರ್ ಧರಿಸಿದ್ದರು. ಇನ್ನು ಕತ್ರೀನಾ ಕೈಫ್ ಸಹೋದರಿ ಇಸಾಬೆಲ್ಲೆ ಕೂಡ ಭಾವ ವಿಕ್ಕಿಗೆ ಅರಶಿಣ ಹಚ್ಚುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಹಳದಿ ಸಮಾರಂಭದ ಅದ್ಭುತ ಫೋಟೋಗಳನ್ನು ಇಲ್ಲಿ ನೋಡಿ…..



