ನಿದ್ರೆ ಮಾಡುವ ವೇಳೇ ಉಸಿರಾಟದ ತೊಂದರೆ ತಂದು ನಿದ್ರೆಯ ಗುಣಮಟ್ಟ ಹಾಳು ಮಾಡುವ ಅಬ್ಸ್‌ಟ್ರಕ್ಟಿವ್ ಸ್ಲೀಪ್ ಅಪ್ನೀಯಿಂದಾಗಿ ವಿಪರೀತ ಗೊರಕೆ ಹೊಡೆಯುವುದು, ಹೈಪರ್‌ಟೆನ್ಷನ್, ನಿದ್ರೆ ವೇಳೆ ಉಸಿರು ಕಟ್ಟಿಕೊಳ್ಳುವುದು, ಹಗಲು ವೇಳೆ ಸುಸ್ತಾಗುವುದು, ಲೈಂಗಿಕ ಆಸಕ್ತಿ ಕ್ಷೀಣಿಸುವಂಥ ಲಕ್ಷಣಗಳು ತಲೆದೋರುತ್ತವೆ.
ಈ ಬಗ್ಗೆ ಅಧ್ಯಯನ ವರದಿಯೊಂದು ಯುರೋಪಿಯನ್ ರೆಸ್ಪರೇಟರಿ ಜರ್ನಲ್‌ನಲ್ಲಿ ಪ್ರಕಟಗೊಂಡಿದ್ದು, “ದೈಹಿಕ ಚಟುವಟಿಕೆಯ ಮಟ್ಟ ಹಾಗೂ ಆಲಸ್ಯಗಳ ನಡುವೆ ಸ್ಪಷ್ಟ ಸಂಬಂಧ ಇದ್ದು, ಆಬ್ಸ್‌ಟ್ರಕ್ಟಿವ್ ಸ್ಲೀಪ್ ಅಮ್ನೇಷಿಯಾಗೆ ಕಾರಣವಾಗುವುದನ್ನು ನಾವು ಕಂಡುಕೊಂಡಿದ್ದೇವೆ. ಪ್ರತಿ ವಾರವೂ ಕನಿಷ್ಠ 150 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗುವವರು, ಟಿವಿ ನೋಡುತ್ತಾ ಕುಳಿತುಬಿಟ್ಟಂಥ ಸಮಯ 4 ಗಂಟೆಗಿಂತ ಕಡಿಮೆ ಇರುವವರಿಗೆ ಓಎಸ್‌ಎ ರಿಸ್ಕ್ ಕಡಿಮೆ ಇರಲಿದೆ. ದೈಹಿಕ ಚಟುವಟಿಕೆಗಳಲ್ಲಿ ಏರಿಕೆಯಾಗುತ್ತಲೇ ಓಎಸ್‌ಎ ರಿಸ್ಕ್ ಬಹಳ ಕಡಿಮೆಯಾಗುತ್ತದೆ” ಎಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಎಪಿಡೆಮಾಲಜಿಸ್ಟ್ ಆಗಿರುವ ಟಿಯಾನ್ಯಿ ಹುವಾಂಗ್ ತಿಳಿಸಿದ್ದಾರೆ.
ನಿಜವಾಯ್ತು ಕಟೀಲ್ ಆಡಿಯೋ ಬಾಂಬ್: ಚಾಣಾಕ್ಷ ನಡೆಯೊಂದಿಗೆ ಒಂದೇ ಕಲ್ಲಿಗೆ ಹಲವು ಹಕ್ಕಿ ಹೊಡೆದ ಹೈಕಮಾಂಡ್
ಟಿವಿ ನೋಡುತ್ತಾ ಸುದೀರ್ಘಾವಧಿಗೆ ಒಂದೆಡೆ ಕುಳಿತುಬಿಟ್ಟರೆ ಕುರುಕಲು ತಿಂಡಿ ಹಾಗೂ ಸಿಹಿ ಪೇಯಗಳನ್ನು ಸವಿಯುವ ಸಾಧ್ಯತೆ ಹೆಚ್ಚಾಗಿ ಓಎಸ್‌ಎಯ ರಿಸ್ಕ್ ಇನ್ನಷ್ಟು ಹೆಚ್ಚಾಗಲಿದೆ ಎಂದು ಟಿಯಾನ್ಯಿ ವಿವರಿಸಿದ್ದಾರೆ.