ನಾವೆಲ್ಲರೂ ಮಿಂಚನ್ನು ನೋಡಿದ್ದೇವೆ. ಮೋಡಗಳು ಮತ್ತು ಗಾಳಿಯ ನಡುವಿನ ವಾತಾವರಣದಲ್ಲಿ ವಿದ್ಯುತ್ ದೈತ್ಯ ಕಿಡಿಯನ್ನು ನೋಡಿ ಆಶ್ಚರ್ಯಪಟ್ಟಿದ್ದೇವೆ. ಒಂದು ವಿಶೇಷ ಎಂದರೆ ಮಿಂಚು ಯಾವಾಗಲೂ “ಅಂಕುಡೊಂಕಾದ” ಮಾದರಿಯಲ್ಲಿ ಕಂಡುಬರುತ್ತದೆ.
ಏಕೆ ಹೀಗೆ ಎಂದು ಸಂಶೋಧಕರು ತಲೆ ಕೆಡಿಸಿಕೊಂಡಿದ್ದು. ಅಂಕುಡೊಂಕಾದ ಮಾದರಿಯಲ್ಲಿ ಮಿಂಚು ಏಕೆ ಕಾಣಿಸುತ್ತದೆ ಎಂಬುದರ ಬಗ್ಗೆ ಇದೀಗ ಅಧ್ಯಯನ ನಡೆಸಲಾಗಿದ್ದು, ಅದರ ವರದಿ ಬಿಡುಗಡೆಯಾಗಿದೆ.
ಈ ಅಂಕುಡೊಂಕುಗಳನ್ನು ಹಂತಗಳು ಎಂದು ಕರೆಯಲಾಗುತ್ತದೆ. ಇದರ ಕುರಿತು ನಡೆದ ಅಧ್ಯಯನವನ್ನು ಜರ್ನಲ್ ಆಫ್ ಫಿಸಿಕ್ಸ್ ಡಿ: ಅಪ್ಲೈಡ್ ಫಿಸಿಕ್ಸ್‌ನಲ್ಲಿ ಪ್ರಕಟಿಸಲಾಗಿದೆ. ಮಿಂಚು ಹೇಗೆ ಸಾವಿರಾರು ಕಿಲೋಮೀಟರ್‌ಗಳಷ್ಟು ಪ್ರಯಾಣಿಸಬಹುದೆಂಬುದನ್ನು ಸಹ ಇದು ವಿವರಿಸುತ್ತದೆ.
ಮಿಂಚು ಎಂಬುದು ಚಂಡಮಾರುತದ ಮೋಡಗಳು ಮತ್ತು ನೆಲದ ನಡುವಿನ ಅಸಮತೋಲನದಿಂದ ಉಂಟಾಗುವ ವಿದ್ಯುತ್ ವಿಸರ್ಜನೆಯಾಗಿದೆ. ಹೆಚ್ಚಿನ ಮಿಂಚು, ಮೋಡಗಳ ಒಳಗೆ ಸಂಭವಿಸುತ್ತವೆ. ಗುಡುಗು ತರಿಸುವ ಮೋಡಗಳು ಶಕ್ತಿಯುತವಾದ ವಿದ್ಯುತ್ ಕ್ಷೇತ್ರಗಳನ್ನು ಹೊಂದಿವೆ, ಅದು ಎಲೆಕ್ಟ್ರಾನ್‌ಗಳನ್ನು ಡೆಲ್ಟಾ ಆಮ್ಲಜನಕದ ಅಣುಗಳನ್ನು ಉತ್ಪಾದಿಸಲು ಸಾಕಷ್ಟು ಶಕ್ತಿಯನ್ನು ಹೊಂದಿರುವ ಹಂತಕ್ಕೆ ಪ್ರಚೋದಿಸುತ್ತದೆ.
ಈ ಅಣುಗಳು ಮತ್ತು ಎಲೆಕ್ಟ್ರಾನ್‌ಗಳು ಬಲವಾಗಿ ತಿಕ್ಕಾಟ ನಡೆಸಿದಾಗ ಅವು ಅಂಕುಡೊಂಕಿನ ಸ್ವರೂಪ ಪಡೆಯುತ್ತವೆ ಎಂದು ಅಧ್ಯಯನ ಹೇಳಿದೆ.