
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಬ್ರೆಜಿಲ್‌ನ ಶಾಲೆಯೊಂದರ ವಿದ್ಯಾರ್ಥಿಗಳ ಗುಂಪು ಅವರ ಕೆಫೆಟೇರಿಯಾದ ಕೆಲಸಗಾರ್ತಿಗೆ ಅಚ್ಚರಿಯ ಉಡುಗೊರೆ ನೀಡಿದ್ದಾರೆ. ಸಿಬ್ಬಂದಿಗೆ ಸರ್ಪ್ರೈಸ್ ನೀಡಲು ಮೊದಲಿಗೆ ಒಬ್ಬಳು ವಿದ್ಯಾರ್ಥಿನಿ ಅವರ ಕಣ್ಣುಗಳನ್ನು ಮುಚ್ಚಿದ್ದಾಳೆ. ನಂತರ ಉಡುಗೊರೆಗಳ ಬುಟ್ಟಿಯೊಂದಿಗೆ ಮತ್ತೊಬ್ಬ ವಿದ್ಯಾರ್ಥಿನಿ ಅಲ್ಲಿಗೆ ಪ್ರವೇಶಿಸಿದ್ದಾಳೆ.
ಮುಚ್ಚಿದ್ದ ಕಣ್ಣನ್ನು ತೆರೆದಾಗ ಸಿಬ್ಬಂದಿ ವಿದ್ಯಾರ್ಥಿನಿಯರು ತಂದ ಉಡುಗೊರೆ ನೋಡಿ ಸಂತೋಷದಿಂದ ಅಶ್ರುಧಾರೆ ಹರಿಸಿದ್ದಾರೆ. ನಂತರ ವಿದ್ಯಾರ್ಥಿನಿಯರನ್ನು ತಬ್ಬಿಕೊಂಡು ಆನಂದಭಾಷ್ಪ ಸುರಿಸುತ್ತಾ ಧನ್ಯವಾದ ತಿಳಿಸಿದ್ದಾರೆ.
ಈ ಹೃದಯಸ್ಪರ್ಶಿ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ. ವಿದ್ಯಾರ್ಥಿನಿಯರು ಸಿಬ್ಬಂದಿಗೆ ತೋರಿರುವ ಗೌರವಕ್ಕೆ ನೆಟ್ಟಿಗರು ಕೂಡ ಭಾವುಕರಾಗಿದ್ದಾರೆ. ಜೊತೆಗೆ ಅವರ ಉತ್ತಮ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.