ಬೆಂಗಳೂರು: ಎಲ್ಲಾ ವಿದ್ಯಾರ್ಥಿ ವೇತನ ಒಂದೇ ಕಡೆ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಂಡಿದೆ. ರಾಜ್ಯ ಬಜೆಟ್ ನಲ್ಲಿ ಘೋಷಿಸಿದಂತೆ ಉನ್ನತ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳಿಗೆ ನೀಡುವ ಎಲ್ಲಾ ರೀತಿಯ ಶಿಷ್ಯವೇತನ ಕಾರ್ಯಕ್ರಮಗಳನ್ನು ಒಗ್ಗೂಡಿಸಿ ಏಕ ಶಿಷ್ಯವೇತನ ಕಾರ್ಯಕ್ರಮದಡಿ ನಿರ್ವಹಣೆ ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ.
2023 -24ನೇ ಸಾಲಿನಿಂದ ಉನ್ನತ ಶಿಕ್ಷಣ ಇಲಾಖೆಯ ಬರುವ ದಿನ ಇಲಾಖೆಗಳು ಮತ್ತು ಸಾರ್ವಜನಿಕ ವಿಶ್ವವಿದ್ಯಾಲಯಗಳು, ಸರ್ಕಾರದ ಅನುದಾನಿತ, ಅರೆ ಸರ್ಕಾರಿ, ಸ್ವಂತ ನಿಧಿ, ದತ್ತಿನಿಧಿ, SCP, TSP, ಒಬಿಸಿ, ಅಲ್ಪಸಂಖ್ಯಾತ ಅನುದಾನದಿಂದ ಒದಗಿಸಲಾಗುವ ಎಲ್ಲಾ ರೀತಿಯ ವಿದ್ಯಾರ್ಥಿ ವೇತನ, ಸಹಾಯಧನ, ನಗದು ಪುರಸ್ಕಾರವನ್ನು ಇ- ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಸ್ಟೇಟಸ್ ಸ್ಕಾಲರ್ ಶಿಪ್ ಪೋರ್ಟಲ್ ಮೂಲಕ ನೇರವಾಗಿ ಖಾತೆಗೆ ಪಾವತಿಸುವಂತೆ ಸರ್ಕಾರ ಆದೇಶಿಸಿದೆ.