ಧಾರವಾಡ: 2019-20 ಮತ್ತು 2020-21ನೇ ಸಾಲಿನ ಪ.ಜಾತಿ ಮತ್ತು ಪ.ಪಂಗಡದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಆಧಾರ್ ಸೀಡಿಂಗ್ ಆಗದೇ ತಮ್ಮ ಖಾತೆಗಳಿಗೆ ಜಮಾ ಆಗದೇ ಇರುವ ವಿದ್ಯಾರ್ಥಿಗಳು ಪೋಸ್ಟ್ ಆಫೀಸ್ನಲ್ಲಿ ಖಾತೆ ತೆರೆಯಲು ಅವಕಾಶವಿರುತ್ತದೆ.
ಜನವರಿ 7 ರಂದು ಧಾರವಾಡದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಂಚೆ ಕಚೇರಿಯವರೊಂದಿಗೆ ಕ್ಯಾಂಪ್ ಆಯೋಜಿಸಿದ್ದು, ಆಧಾರ್ ಸೀಡಿಂಗ್ ಆಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಮೋಬೈಲ್ ಸಂಖ್ಯೆಯೊಂದಿಗೆ ಕ್ಯಾಂಪ್ಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಜಂಟಿ ನಿರ್ದೇಶಕರ ಕಚೇರಿ ಹಾಗೂ ಸಂಬಂಧಿಸಿದ ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಹಾಗೂ ದೂರವಾಣಿ ಸಂಖ್ಯೆ-0836-2447201, 2440194 ಸಂಪರ್ಕಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.