
ಬೆಂಗಳೂರು : 2023-24 ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ದಾಖಲಾತಿಗೆ (ದಂಡ ಶುಲ್ಕ ಸಹಿತ) ಗಡುವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಜುಲೈ 31 ರವರೆಗೆ ವಿಸ್ತರಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯು, ಪ್ರಥಮ ಹಾಗೂ ದ್ವಿತೀಯ ಪಿಯುಸಿ ದಾಖಲಾತಿ ಪಡೆದವರು ವಿಶೇಷ ದಂಡ ಶುಲ್ಕ 2,890 ರೂ. ಪಾವತಿಸಿ ಪ್ರವೇಶ ಪಡೆಯಲು ಜುಲೈ 31 ಕೊನೆಯ ದಿನವಾಗಿದೆ. ದಾಖಲಾತಿಯ ಕೊನೆಯ ದಿನ ಮುಗಿದು ಮಾರನೆ ದಿನವೇ ದಂಡ ಶುಲ್ಕ ಹಾಗೂ ವಿಶೇಷ ದಂಡ ಶುಲ್ಕವನ್ನು ಪ್ರಾಂಶುಪಾಲರು ಸರ್ಕಾರ/ ಇಲಾಖೆಗೆ ಪಾವತಿಸಬೇಕು ಎಂದು ಸೂಚನೆ ನೀಡಲಾಗಿದೆ.