ಮುಂಬೈ: ನೀವು ಇಮ್ರಾನ್ ಖಾನ್ ಮತ್ತು ಜೆನಿಲಿಯಾ ಡಿಸೋಜಾ ಅವರ ಜಾನೇ ತು…… ಯಾ ಜಾನೇ ನಾ ಅನ್ನು ಹದಿಹರೆಯದವರಾಗಿದ್ದಾಗ ಅಥವಾ ನಿಮ್ಮ ಕಾಲೇಜು ದಿನಗಳಲ್ಲಿ ವೀಕ್ಷಿಸಿದ್ದರೆ, ಮುಂಬೈನ ಕೆಲವು ಕಾಲೇಜು ವಿದ್ಯಾರ್ಥಿಗಳು ಚಿತ್ರೀಕರಿಸಿದ ಈ ವಿಡಿಯೋ ನಿಮ್ಮ ಗಮನ ಸೆಳೆಯುತ್ತದೆ.
ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನ ವಿದ್ಯಾರ್ಥಿಗಳು ಜಾನೇ ತೂ……ಯಾ ಜಾನೇ ನಾ ಚಿತ್ರದ ಕಭಿ ಕಭಿ ಅದಿತಿ ಹಾಡನ್ನು ಮರುಸೃಷ್ಟಿಸಿದ್ದರು. ಹಾಡಿನಲ್ಲಿ ಇಮ್ರಾನ್ ಮತ್ತು ಜೆನಿಲಿಯಾ ಕಾಣಿಸಿಕೊಂಡಿದ್ದರು. ಜಾನೇ ತೂ…… ಯಾ ಜಾನೇ ನಾ 2008 ರಲ್ಲಿ ಬಿಡುಗಡೆಯಾಗಿತ್ತು. ಚಿತ್ರ ಮಾತ್ರವಲ್ಲ, ಹಾಡುಗಳು ಕೂಡ ದೊಡ್ಡ ಹಿಟ್ ಆಗಿದ್ದವು. ವಿದ್ಯಾರ್ಥಿಗಳು ಹಾಡನ್ನು ಮರುಸೃಷ್ಟಿಸಿದ್ದು, ಇದೀಗ ಭಾರಿ ವೈರಲ್ ಆಗಿದೆ.
ಸೇಂಟ್ ಕ್ಸೇವಿಯರ್ ಕಾಲೇಜಿನ ಹೆಚ್ಚುವರಿ ಪಠ್ಯಕ್ರಮ ಸಮಿತಿಯು ಇದರ ವಿಡಿಯೋ ಶೇರ್ ಮಾಡಿಕೊಂಡಿದೆ. ಮೂಲ ಹಾಡನ್ನು ಸಹ ಅದೇ ಕ್ಯಾಂಪಸ್‌ನಲ್ಲಿ ಚಿತ್ರೀಕರಿಸಲಾಗಿದೆ. ವಿದ್ಯಾರ್ಥಿಗಳು ಇದನ್ನು ಸಾಧ್ಯವಾದಷ್ಟು ಮೂಲ ಹಾಡಿನಂತೆಯೇ ತಯಾರಿಸಲು ಪ್ರಯತ್ನಿಸಿರುವುದನ್ನು ನೋಡಬಹುದು. ಈ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.