ಬೆಂಗಳೂರು : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ನೊಂದಾಯಿಸಿಕೊಳ್ಳುವ ದಿನಾಂಕ ವಿಸ್ತರಣೆ ಮಾಡಲಾಗಿದೆ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.
2024 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ- ಕೈ ಖಾಸಗಿ ಅಭ್ಯರ್ಥಿಗಳಾಗಿ ನೊಂದಾಯಿಸಿಕೊಳ್ಳಲು ಉಲ್ಲೇಖ 02 ರಲ್ಲಿ ದಿನಾಂಕ 13-11-2023 ರವರೆಗೆ ರೂ 500/- ಗರಿಷ್ಠ ದಂಡಶುಲ್ಕದೊಂದಿಗೆ ಅವಕಾಶ ನೀಡಲಾಗಿತ್ತು. ಆದರೆ ಪೋಷಕರು ಹಾಗೂ ವಿದ್ಯಾರ್ಥಿಗಳ ದೂರವಾಣಿ ಕರೆಗಳ ಮೇರೆಗೆ ಖಾಸಗಿ ಅಭ್ಯರ್ಥಿಗಳಾಗಿ ನೊಂದಾಯಿಸಿಕೊಳ್ಳುವ ದಿನಾಂಕವನ್ನು ವಿಸ್ತರಿಸಿ ಆದೇಶಿಸಲಾಗಿದೆ.
ಜಿಲ್ಲಾ ಉಪನಿರ್ದೇಶಕರು ಪ್ರಾಂಶುಪಾಲರಿಂದ ಸ್ವೀಕರಿಸಿದ ಅರ್ಜಿಗಳನ್ನು ಮಂಡಲಿಯ ಜಾಲತಾಣದ PU Exam Portal Login ನಲ್ಲಿ Update ಮಾಡಿರುವುದನ್ನು ಖಾತ್ರಿಪಡಿಸಿಕೊಂಡು, ಪ್ರಾಂಶುಪಾಲರಿಂದ Update ಮಾಡಿರುವುದಕ್ಕೆ ಸಂಬಂಧಿಸಿದಂತೆ ಮುಚ್ಚಳಿಕೆ ಪತ್ರ ಪಡೆದ ನಂತರ ಕಾಲೇಜುವಾರು ಕ್ರೋಢೀಕೃತ ವಿದ್ಯಾರ್ಥಿಗಳ ಪಟ್ಟಿ, ಶುಲ್ಕ ಪಾವತಿಸಿರುವ ಮೂಲ ಚಲನ್ ಹಾಗೂ ಚೆಕ್ಲಿಸ್ಟನ್ನು ಖುದ್ದಾಗಿ ಕೇಂದ್ರ ಕಛೇರಿಗೆ ದಿನಾಂಕ: 04-12-2023 ರಂದು ಸಲ್ಲಿಸಲು ಸೂಚಿಸಲಾಗಿದೆ ಎಂದು ನಿರ್ದೇಶಕರು, ಪದವಿ ಪೂರ್ವ ಕರ್ನಾಟಕ’ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದ್ದಾರೆ.