ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಕಾಂಗ್ರೆಸ್ ಭರಪೂರ ಭರವಸೆಗಳನ್ನು ನೀಡಿದೆ. ಮಹಾಲಕ್ಷ್ಮಿ ಯೋಜನೆ ಅಡಿ ಪ್ರತಿ ಬಡ ಕುಟುಂಬಕ್ಕೆ ವರ್ಷಕ್ಕೆ ಒಂದು ಲಕ್ಷ ರೂ. ಹಣ ವರ್ಗಾವಣೆ, 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪದವೀಧರರಿಗೆ ವರ್ಷಕ್ಕೆ ಒಂದು ಲಕ್ಷ ರೂ. ಸ್ಟೈಫಂಡ್ ನೀಡುವುದಾಗಿ ಹೇಳಲಾಗಿದೆ.
ಕರ್ನಾಟಕ, ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿ ಅಧಿಕಾರಕ್ಕೇರುವ ಮೂಲಕ ಯಶಸ್ವಿಯಾದ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿಯೂ 25 ಗ್ಯಾರಂಟಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಮುಖವಾಗಿ 25 ಲಕ್ಷ ನಗದು ರಹಿತ ಆರೋಗ್ಯ ವಿಮಾ ಯೋಜನೆ, 12ನೇ ತರಗತಿವರೆಗೆ ಎಲ್ಲರಿಗೂ ಉಚಿತ ಶಿಕ್ಷಣ, ಶೈಕ್ಷಣಿಕ ಸಾಲ ಮನ್ನಾ ಸೇರಿ ಹಲವು ಭರವಸೆಗಳನ್ನು ನೀಡಲಾಗಿದೆ.
ಇದೀಗ ಕಾಂಗ್ರೆಸ್ 9 ರಿಂದ 12ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಾಯವಾಗಲು ಮೊಬೈಲ್ ಫೋನ್ ನೀಡುವುದಾಗಿ ಹೇಳಿದೆ.