ಅಮೆರಿಕದ ಟೆಕ್ಸಾಸ್ನ ರಾಕ್ವಾಲ್-ಹೀತ್ ಹೈಸ್ಕೂಲ್ನಲ್ಲಿ ನಡೆದ ಘಟನೆ ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ಆಘಾತವನ್ನುಂಟು ಮಾಡಿದೆ. ಈ ಶಾಲೆಯ ಕೋಚ್ ಜಾನ್ ಹ್ಯಾರೆಲ್, ವಿದ್ಯಾರ್ಥಿಗಳ ಮೇಲೆ ಅತಿಯಾದ ಶಿಸ್ತು ಕ್ರಮ ಕೈಗೊಂಡ ಆರೋಪ ಎದುರಿಸುತ್ತಿದ್ದಾರೆ.
ಘಟನೆಯ ವಿವರ
ತರಬೇತಿಯ ಸಮಯದಲ್ಲಿ ಕೋಚ್ ಹ್ಯಾರೆಲ್, ವಿದ್ಯಾರ್ಥಿಗಳನ್ನು 50 ನಿಮಿಷಗಳಲ್ಲಿ ಸುಮಾರು 400 ಪುಶ್-ಅಪ್ಗಳನ್ನು ಮಾಡುವಂತೆ ಸವಾಲು ಹಾಕಿದ್ದಾರೆ.
ತರಬೇತಿಯ ಸಮಯದಲ್ಲಿ ಯಾವುದೇ ತಪ್ಪು ಮಾಡಿದರೆ ಪ್ರತಿ ತಪ್ಪಿಗೆ 16 ಪುಶ್-ಅಪ್ಗಳನ್ನು ಮಾಡಬೇಕು ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳು ಸುಮಾರು 23 ತಪ್ಪುಗಳನ್ನು ಮಾಡಿದ್ದರಿಂದ ಅವರು ಒಟ್ಟು 368 ಪುಶ್-ಅಪ್ಗಳನ್ನು ವಿರಾಮವಿಲ್ಲದೆ ಮಾಡಬೇಕಾಯಿತು.
ಈ ಕಠಿಣ ಶಿಕ್ಷೆಯ ಪರಿಣಾಮವಾಗಿ 26 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ವಿದ್ಯಾರ್ಥಿಗಳಿಗೆ ಸ್ನಾಯುಗಳಲ್ಲಿ ಗಾಯಗಳಾಗಿದ್ದು, ಇದು ಅವರ ಜೀವನದ ಮೇಲೆ ಪರಿಣಾಮ ಬೀರಬಹುದು ಎಂದು ವೈದ್ಯರು ಹೇಳಿದ್ದಾರೆ.
ವಿದ್ಯಾರ್ಥಿಗಳು ತಪ್ಪಾದ ಉಡುಪು ಧರಿಸಿದ್ದರು, ತರಗತಿಯಲ್ಲಿ ಮಾತನಾಡಿದರು, ತಪ್ಪಾದ ವರ್ತನೆ ತೋರಿದ್ದರು ಇತ್ಯಾದಿ ಸಣ್ಣಪುಟ್ಟ ತಪ್ಪುಗಳಿಗೆ ಈ ಶಿಕ್ಷೆ ನೀಡಲಾಗಿತ್ತು.
ಈ ಘಟನೆಯ ನಂತರ ಕೋಚ್ ಹ್ಯಾರೆಲ್ ಅವರನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ. ಈ ವಿಷಯ ನ್ಯಾಯಾಲಯಕ್ಕೆ ಹೋಗಿದ್ದು, ಆದರೆ ಕೋಚ್ ವಿರುದ್ಧ ಯಾವುದೇ ಕ್ರಿಮಿನಲ್ ಆರೋಪ ಹೂಡಲಾಗಿಲ್ಲ. ಕೆಲವು ಪ್ರಕರಣಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಲಾಗಿದೆ ಆದರೆ ಇನ್ನೂ ಕೆಲವು ಪ್ರಕರಣಗಳು ಬಗೆಹರಿಯದೇ ಉಳಿದಿವೆ.