ನವದೆಹಲಿ: ಶೈಕ್ಷಣಿಕ ಸಾಲ ನಿಯಮ ಸರಳೀಕರಣಕ್ಕೆ ಆರ್‌ಬಿಐ ಮುಂದಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇದು ಜಾರಿಗೆ ಬರಲಿದೆ. ಸುಲಭವಾಗಿ ಶಿಕ್ಷಣ ಸಾಲ ಸಿಗುವಂತೆ ಮಾಡುವ ಸಲುವಾಗಿ ಶೈಕ್ಷಣಿಕ ಸಾಲದ ನಿಯಮಗಳನ್ನು ಸರಳೀಕರಣ ಮಾಡಲು ಆರ್‌ಬಿಐ ತೀರ್ಮಾನಿಸಿದೆ.
ಮುಂದಿನ ಶೈಕ್ಷಣಿಕ ಸಾಲಿನಿಂದ ಅಂದರೆ 2024 -25ನೇ ಸಾಲಿನಿಂದ ಈ ಬದಲಾವಣೆ ಜಾರಿಗೆ ಬರಲಿದೆ. ಹೊಸ ಶೈಕ್ಷಣಿಕ ಸಾಲ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳು ದಾಖಲಾತಿ ಪ್ರಕ್ರಿಯೆಗೆ ಹೆಚ್ಚು ತಲೆಕೆಡಿಸಿಕೊಳ್ಳುವಂತಿಲ್ಲ. ಡಿಜಿಟಲ್ ಅಡ್ಮಿಶನ್ ಲೆಟರ್ ಸಾಲ ಪಡೆಯಲು ಮುಖ್ಯ ದಾಖಲೆಯಾಗಿರಲಿದೆ. ತೊಂದರೆ ಮುಕ್ತ ಸಾಲ ಪರಿಕಲ್ಪನೆಯಲ್ಲಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಶಿಕ್ಷಣ ಸಾಲ ಕಲ್ಪಿಸಲು ಆರ್‌ಬಿಐ ಕ್ರಮ ಕೈಗೊಂಡಿದೆ. ಇದರಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ಸಿಗಲಿದೆ.