2021-22ನೇ ಶೈಕ್ಷಣಿಕ ಸಾಲಿನಲ್ಲಿ ಮೆಟ್ರಿಕ್ ನಂತರದ ವಿವಿಧ ಕೋರ್ಸ್‍ಗಳಲ್ಲಿ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ, ಪ್ರೋತ್ಸಾಹಧನ ಮಂಜೂರು ಮಾಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಬಳ್ಳಾರಿ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅ.30. ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಹಿಂದಿನ ಎಲ್ಲಾ ಸೆಮಿಸ್ಟರ್/ವರ್ಷದ ಅಂಕಪಟ್ಟಿ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, 1 ಫೋಟೋ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್‍ಕಾರ್ಡ್ ದಾಖಲಾತಿಗಳೊಂದಿಗೆ ssw.kar.nic, https://sw.kar.nic.in/ swprizemoney/WebPages/validation.aspx ಅರ್ಜಿ ಸಲ್ಲಿಸಬಹುದು.
ಕೋರ್ಸ್ ವಿವರ:
ದ್ವಿತೀಯ ಪಿಯುಸಿ, 3ವರ್ಷದ ಡಿಪ್ಲೋಮಾ ಪಾಲಿಟೆಕ್ನಿಕ್ ಗೆ ಪ್ರೋತ್ಸಹಧನದ ಮೊತ್ತ 20 ಸಾವಿರ ರೂ., ಯಾವುದೇ ಪದವಿ(ಬಿಎ,ಬಿಕಾಂ,ಬಿಎಸ್ಸಿ ಹಾಗೂ ಇತರೆ) 25 ಸಾವಿರ ರೂ., ಯಾವುದೇ ಸ್ನಾತಕೋತ್ತರ ಪದವಿ(ಎಂಎ,ಎಂಎಸ್ಸಿ ಹಾಗೂ ಇತರೆ) 30 ಸಾವಿರ ರೂ., ಅಗ್ರಿಕಲ್ಚರ್, ಎಂಜಿನಿಯರಿಂಗ್, ವೆಟರ್ನರಿ ಹಾಗೂ ಮೆಡಿಸಿನ್ 35 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ 1ನೇ ಗೇಟ್ ಹತ್ತಿರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಸಮಾಜ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ದೂ.08392-244738, ಮೊ.9480843073ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.