
ವಿಜಯಪುರ: ವಿದ್ಯಾರ್ಥಿನಿಯರೊಂದಿಗೆ ಆಸಭ್ಯವಾಗಿ ವರ್ತಿಸಿದ ಇಬ್ಬರನ್ನು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ವಿಜಯಪುರ ನಗರದ ಕೆಬಿಎಸ್ ಸಂಖ್ಯೆ 4ರ ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ಮತ್ತು ಅನುಚಿತ ವರ್ತನೆ ತೋರಿದೆ ಆರೋಪದ ಮೇರೆಗೆ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿ ವಿಜಯಪುರ ನಗರ ಬಿಇಒ ಬಸವರಾಜ ತಳವಾರ ಆದೇಶ ಹೊರಡಿಸಿದ್ದಾರೆ.
ಮುಖ್ಯ ಶಿಕ್ಷಕ ಜಗದೀಶ ಅಕ್ಕಿ, ಸಹ ಶಿಕ್ಷಕ ಎಂ.ಕೆ. ಪಾಟೀಲ್ ಅವರನ್ನು ಅಮಾನತು ಮಾಡಲಾಗಿದೆ. ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಇಲಾಖೆಯ ವಿಚಾರಣೆಯ ಕಾಯ್ದಿರಿಸಿ ಇಬ್ಬರು ಶಿಕ್ಷಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.