ಚಾಟ್GPT ಅನ್ನು ನವೆಂಬರ್ 2022 ರಲ್ಲಿ ಸಂವಾದಾತ್ಮಕ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್ ಆಗಿ ಪ್ರಾರಂಭಿಸಲಾಯಿತು . ಅಂದಿನಿಂದ ವಿವಿಧ ಉದ್ದೇಶಗಳಿಗಾಗಿ ಇದನ್ನು ಬಳಸಲಾಗುತ್ತಿದೆ.
ಜನರು ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ ಅನ್ನು ಪ್ರಬಂಧಗಳನ್ನು ಬರೆಯಲು, ವಿಷಯ ಕಲ್ಪನೆಗಳನ್ನು ರಚಿಸಲು, ಮಾರ್ಕೆಟಿಂಗ್ ಕಂಟೆಂಟ್ , ಪ್ಯಾರಾಫ್ರೇಸಿಂಗ್ ಮಾಹಿತಿ, ಕವನ ರಚಿಸಲು ಮತ್ತು ಇನ್ನೂ ಹೆಚ್ಚಿನದಕ್ಕಾಗಿ ಬಳಸುತ್ತಾರೆ.
ಆದಾಗ್ಯೂ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ವಿಭಿನ್ನವಾಗಿ ಯೋಚಿಸಿದ್ದು ಚಾಟ್ GPT ಯಿಂದ ಪಾರ್ಕಿಂಗ್ ದಂಡ ಕಟ್ಟುವುದನ್ನ ತಪ್ಪಿಸಿದ್ದಾಳೆ.
ಬಿಬಿಸಿ ವರದಿಯ ಪ್ರಕಾರ ಇಂಗ್ಲೆಂಡ್‌ನ ಯಾರ್ಕ್ ಮೂಲದ ಮಿಲ್ಲಿ ಹೌಲ್ಟನ್ ಎಂಬ ವಿದ್ಯಾರ್ಥಿನಿಗೆ ಪಾರ್ಕಿಂಗ್ ದಂಡವಾಗಿ 60 ಯೂರೋ (5,360 ರೂ.) ದಂಡ ಪಾವತಿಸಲು ಕೇಳಲಾಯಿತು.
ವಿದ್ಯಾರ್ಥಿನಿಯು ತಾನು ದಂಡ ಕಟ್ಟಬೇಕಾಗಿಲ್ಲ ಎಂದು ಭಾವಿಸಿ ಅಧಿಕಾರಿಗಳಿಗೆ ಪತ್ರವನ್ನು ಬರೆಯಲು ಚಾಟ್‌ಜಿಪಿಟಿಯ ಸಹಾಯವನ್ನು ಪಡೆದರು.
ಹೌಲ್ಟನ್ ನ ಯಾರ್ಕ್ ಸಿಟಿ ಕೌನ್ಸಿಲ್‌ನಿಂದ ನೋಟಿಸ್ ಸ್ವೀಕರಿಸಿದ ಆಕೆಗೆ ಪಾರ್ಕಿಂಗ್ ವಿಚಾರವಾಗಿ ದಂಡ ಕಟ್ಟುವಂತೆ ಸೂಚಿಸಲಾಗಿತ್ತು.
ಈ ಸಮಸ್ಯೆಯ ಕುರಿತು ಅಧಿಕಾರಿಗಳಿಗೆ ಪತ್ರ ಕಳಿಸಲು ಈಕೆ ಜಾಟ್ GPT ಬಳಸಿದಳು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ದಂಡದ ಸೂಚನೆಯನ್ನು ಹಿಂತೆಗೆದುಕೊಂಡರು.
ತನ್ನ ಬೀದಿಯಲ್ಲಿ ವಾಹನ ನಿಲುಗಡೆ ಮಾಡಿದ್ದಕ್ಕಾಗಿ ಆಕೆಗೆ ದಂಡವನ್ನು ತಪ್ಪಾಗಿ ನೀಡಲಾಗಿದೆ ಎಂದು ಹೌಲ್ಟನ್ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.