ಹೈದರಾಬಾದ್: ಪರೀಕ್ಷಾ ಕೇಂದ್ರಕ್ಕೆ ಅನಿವಾರ್ಯ ಕಾರಣದಿಂದ ತಡವಾಗಿ ಹೋಗಿದ್ದಕ್ಕೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಮಂಗುರ್ಲಾ ಗ್ರಾಮದಲ್ಲಿ ಈ ದುರಂತ ನಡೆದಿದೆ. ಪರೀಕ್ಷೆ ಬೆಳಿಗ್ಗೆ 9 ಗಂಟೆಯಿಂದ 2 ಗಂಟೆಯವರೆಗೆ ನಿಗದಿಯಾಗಿತ್ತು. 17 ವರ್ಷದ ವಿದ್ಯಾರ್ಥಿ ಪರೀಕ್ಷಾ ಹಾಲ್ ಗೆ 15 ನಿಮಿಷ ತಡಮಾಡಿ ಹೋಗಿದ್ದಾನೆ. ಪರೀಕ್ಷೆ ಬರೆಯಲು ವಿದ್ಯಾರ್ಥಿ ಅವಕಾಶ ಕೊಡದೆ ಕಳುಹಿಸಿದ್ದಾರೆ.
ಮನನೊಂದು ಗ್ರಾಮಕ್ಕೆ ವಾಪಾಸ್ ಆದ ವಿದ್ಯಾರ್ಥಿ ಮನೆಯ ಹಿಂದಿರುವ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೂ ಮುನ್ನ ಡೆತ್ ನೋಟ್ ನಲ್ಲಿ ಪರೀಕ್ಷೆಗೆ ತಡವಾಗಿ ಹೋಗಿದ್ದಕ್ಕೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿಲ್ಲ. ಇದರಿಂದ ನೊಂದು ಸಾವಿಗೆ ಶರಣಾಗುತ್ತಿರುವುದಾಗಿ ಬರೆದಿಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.