alex Certify ಪ್ರೀತಿಸುವಂತೆ ಯುವಕನ ಬೆದರಿಕೆ, ದುಡುಕಿನ ನಿರ್ಧಾರ ಕೈಗೊಂಡ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸುವಂತೆ ಯುವಕನ ಬೆದರಿಕೆ, ದುಡುಕಿನ ನಿರ್ಧಾರ ಕೈಗೊಂಡ ಯುವತಿ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕರಿಮನೆ ಗ್ರಾಮದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಸುವಂತೆ ಯುವಕನೊಬ್ಬ ಒತ್ತಡ ಹಾಕಿದ್ದರಿಂದ ಮನನೊಂದು ಆಕೆ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.

ಪಿಯುಸಿ ಓದುತ್ತಿದ್ದ ಯುವತಿ ಮೇ 23 ರಂದು ವಿಷ ಸೇವಿಸಿದ್ದು, ಆಕೆಯನ್ನು ಹೊಸನಗರ ಆಸ್ಪತ್ರೆಗೆ ಸೇರಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 3 ರಂದು ಮೃತಪಟ್ಟಿದ್ದಾರೆ.

ಕರಿಮನೆ ಗ್ರಾಮದ ಪ್ರಶಾಂತ್ ಎಂಬಾತ ಯುವತಿಗೆ ಪ್ರೀತಿಸುವಂತೆ ಒತ್ತಡ ಹಾಕುತ್ತಿದ್ದ. ನೀನು ಸಾಯಬೇಕು ಇಲ್ಲವಾದರೆ ನನ್ನನ್ನು ಪ್ರೀತಿಸಬೇಕು ಎಂದು ಬೆದರಿಕೆ ಹಾಕಿದ್ದ. ಈ ವಿಚಾರ ತಿಳಿದ ಯುವತಿ ಮನೆಯವರು ಬುದ್ಧಿವಾದ ಹೇಳಿದ್ದರು. ಆದರೂ, ಆತ ಮಾನಸಿಕ ಕಿರುಕುಳ ನೀಡಿದ್ದರಿಂದ ಬೇಸತ್ತ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...