
ಮುಂಬೈ: ವಿದ್ಯಾರ್ಥಿನಿಯೊಬ್ಬಳು 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನ ದಾದರ್ ಪ್ರದೇಶದಲ್ಲಿ ನಡೆದಿದೆ.
ಝಾನಾ ಸೇಥಿಯಾ (20) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಝಾನಾ, ಟೆಕ್ನೋ ಹೈಟ್ಸ್ ಕಟ್ಟದ ಎಂಟನೇ ಮಹಡಿಯಲ್ಲಿ ಪೋಷಕರ ಜೊತೆ ವಾಸವಾಗಿದ್ದಳು. ಪ್ರತಿದಿನ ತನ್ನ ಸ್ನೇಹಿತರೊಂದಿಗೆ 14ನೇ ಮಹಡಿಯ ಟೆರೇಸ್ ಗೆ ತೆರಳುತ್ತಿದ್ದಳು. ಹೀಗೆ ಟೆರೇಸ್ ಮೇಲೆ ಹೋದವಳು ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ಝಾನಾಳಿಗೆ ಡೈರಿ ಬರೆಯುವ ಅಭ್ಯಾಸವಿತ್ತು. ಡೈರಿಯಲ್ಲಿ ತನಗೆ ಆತ್ಮಹತ್ಯೆ ಆಲೋಚನೆ ಬರುತ್ತಿರುವುದಾಗಿ ಬರೆದುಕೊಂಡಿರುವ ಬಗ್ಗೆ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.