
ಬೆಂಗಳೂರು: ಈಗಿನ ಮಕ್ಕಳಿಗೆ ಶಿಕ್ಷಕರಾಗಲಿ, ಪೋಷಕರಾಗಲಿ ಒಂದು ಮಾತು ಬೈಯ್ದು ಬುದ್ಧಿಹೇಳುವಂತಿಲ್ಲ. ಗದರಿಸಿ ಹೇಳದಿದ್ದರೆ ಅರ್ಥವಾಗಲ್ಲ, ಹೇಳಿದರೆ ಅವಮಾನವಾಯಿತು ಎಂದು ದುಡುಕಿನ ನಿರ್ಧಾರ ಕೈಗೊಗೊಂಡೇ ಬಿಡುತ್ತಾರೆ. ಇಂತದ್ದೇ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ಶಾಲಾ ವಿದ್ಯಾರ್ಥಿನಿಯೊಬ್ಬಳು ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಬಾಪೂಜಿನಗರದಲ್ಲಿ ನಡೆದಿದೆ.
A1 ಫಹಾದ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಪ್ರಾಂಶುಪಾಲರು ಬೈದರು ಎಂದು ನೊಂದ ವಿದ್ಯಾರ್ಥಿನಿ ಶಾಲೆಯ ಕಟ್ಟಡದಿಂದ ಜಿಗಿದಿದ್ದಾಳೆ. ಗಂಭೀರವಾಗಿ ಗಾಯಗೊಡಿರುವ ವಿದ್ಯಾರ್ಥಿನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.