ಮುಂಬೈ: ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಪ್ರಾಂಶುಪಾಲ ಸೇರಿ 7 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚವಾಡ್ ನಲ್ಲಿ ನಡೆದಿದೆ.
ಶಾಲೆಯ ದೈಹಿಕ ಶಿಕ್ಷಕ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಆತನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತಲ್ಲದೇ ಈ ಹಿಂದೆ ಬಂಧಿಸಲಾಗಿತ್ತು. ಆದರೆ ಶಾಲೆ ಆಡಳಿತ ಮಂಡಳಿ ಆತನನ್ನು ಉಳಿಸಿಕೊಂಡಿತ್ತು. ಈ ನಿರ್ಲಕ್ಷಕ್ಕಾಗಿ ಇದೀಗ ಪ್ರಾಂಶುಪಾಲ, ಟ್ರಸ್ಟಿ, ಪಿಟಿ ಶಿಕ್ಷಕ ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ ಜೊತೆಗೆ ಬಿಎಸ್ ಎಸ್ ನ 74, 78, 351 (2) ಹಾಗೂ 115(2) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.