ಸಾಮಾನ್ಯವಾಗಿ ಫುಡ್ ವ್ಲಾಗರ್‌ಗಳು ದೇಶದ ವಿವಿಧ ನಗರಗಳ ಬೀದಿಗಳಲ್ಲಿ ಮಾರಾಟ ಮಾಡುವ ಬಗೆಬಗೆಯ ಭಕ್ಷ್ಯಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ಫುಡ್ ವ್ಲಾಗರ್ ವಿಶಾಲ್ ಶರ್ಮಾ ಇತ್ತೀಚೆಗೆ ಶೇರ್ ಮಾಡಿದ ವಿಡಿಯೋವೊಂದು ನೆಟ್ಟಿಗರ ಮನ ಗೆಲ್ಲುತ್ತಿದೆ.
ಫರೀದಾಬಾದ್‌ನ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ತಯಾರಿಸಿದ ಖಾದ್ಯಗಳನ್ನು ಮಾರಾಟ ಮಾಡುತ್ತಿರುವ ವಿಡಿಯೋ ಇದಾಗಿದೆ. ತಾತ್ಕಾಲಿಕವಾಗಿ ಅಳವಡಿಸಲಾದ ಸ್ಟಾಲ್ ಒಂದರಲ್ಲಿ ನಿಂತ ವಿದ್ಯಾರ್ಥಿ ತಾನು ಮಾರಾಟ ಮಾಡುತ್ತಿರುವ ಒಂದೊಂದು ಖಾದ್ಯದ ಹೆಸರನ್ನೂ ವ್ಲಾಗರ್‌ಗೆ ಪರಿಚಯಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹದು.
ಪೋಸ್ಟ್ ಆದಾಗಿನಿಂದ ಇದುವರೆಗೂ ಒಂದೂವರೆ ಲಕ್ಷ ವೀಕ್ಷಣೆಗಳನ್ನು ಕಂಡಿದೆ ಈ ವಿಡಿಯೋ.
https://youtu.be/JR-jV83UWgI