ಬೆಂಗಳೂರು: ವಿದ್ಯಾಭ್ಯಾಸ ಹೇಳಿಕೊಟ್ಟು ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶಕನಾಗಬೇಕಿಇದ್ದ ಶಿಕ್ಷಕನೇ ವಿದ್ಯಾರ್ಥಿನಿ ಮೇಲೆ ಅತ್ಯಾಚರವೆಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಶಿಕ್ಷಕನೇ ಅತ್ಯಾಚಾರವೆಸಗಿದ್ದಾನೆ. ವಿದ್ಯಾರ್ಥಿನಿಯನ್ನು ನಂಬಿಸಿ ಬೆಂಗಳೂರು ಸಮೀಪದ ದೇವರಾಯನ ದುರ್ಗಕ್ಕೆ ಕರೆದೊಯ್ದ ಪಿ.ಟಿ ಟೀಚರ್ ದಾದಾಪೀರ್ ಎಂಬಾತ ಬಳಿಕ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.
ಇಷ್ಟಕ್ಕೇ ನಿಲ್ಲದ ಕಾಮುಕ ಶಿಕ್ಷಕನ ಕೃತ್ಯ, ವಿದ್ಯಾರ್ಥಿನಿಯನ್ನು ತುಮಕೂರಿನ ಲಾಡ್ಜ್ ಗೆ ಕರೆದೊಯ್ದು ಅಲ್ಲಿಯೂ ಅತ್ಯಾಚಾರವೆಸಗಿದ್ದಾನೆ. ಬಳಿಕ ಬಾಲಕಿಗೆ ಹೆದರಿಸಿ ಬೆದರಿಸಿ ಆರೋಪಿ ತನ್ನ ಮನೆಗೆ ಕರೆದು ಅಲ್ಲಿಯೂ ಅತ್ಯಾಚಾರ ನಡೆಸಿದ್ದಾನೆ.
ಶಿಕ್ಷಕ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. ವಿಷಯ ಯಾರುಗಾದರೂ ಹೇಳಿದರೆ ಕೊಲೆ ಮಡುವುದಾಗಿ ಬೆದರಿಸಿದ್ದಾನೆ. ದೌರ್ಜನ್ಯಕ್ಕೆ ನಲುಗಿರುವ ಬಾಲಕಿ ಕೊನೆಗೂ ಪೋಷಕರಿಗೆ ವಿಷಯ ತಿಳಿಸಿದ್ದಾಳೆ.
ಮಗಳ ಸ್ಥಿತಿಕಂಡು ಆಘಾತಕ್ಕೊಳಗಾಗಿರುವ ಪೊಲೀಸರು ದಾಬಸ್ ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಕಾಮುಕ ಶಿಕ್ಷಕ ದಾದಾಪೀರ್ನನ್ನು ಪೊಲೀಸರು ಬಂಧಿಸಿದ್ದಾರೆ.