![](https://kannadadunia.com/wp-content/uploads/2025/02/student-latter.jpg)
ಕೆಲ ವಿದ್ಯಾರ್ಥಿಗಳು ಶಾಲೆಗೆ ರಜೆ ಹಾಕಲು ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳಲು ಬರೆಯುವ ಲಿವ್ ಲೆಟರ್ ಗಳು ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತವೆ. ಅದೇ ರೀತಿ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕರಿಗೆ ಬರೆದಿರುವ ರಜಾ ಚೀಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಇವತ್ತು ನನಗೆ ರಜೆ ಕೊಡಿ. ಏಕೆಂದರೆ ನಮ್ಮ ಅಮ್ಮ ಆಸ್ಪತ್ರೆಗೆ ಹೋಗುತ್ತಾಳೆ. ಹಾಗಾಗಿ ಮನೆಯಲ್ಲಿ ಹಸುಗಳಿಗೆ ನೀರು ಕೊಡಬೇಕು, ಮನೆ ಕೆಲಸ ಮಾಡಬೇಕು. ಹಾಗಾಗಿ ರಜೆ ನೀಡುವಂತೆ ಕೇಳಿಕೊಳ್ಳುತ್ತೇನೆ ಎಂದು ವಿದ್ಯಾರ್ಥಿನಿ ಮನವಿ ಮಾಡಿದ್ದಾಳೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಬರೆದಿರುವ ಈ ರಜಾ ಚೀಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗಮನ ಸೆಳೆಯುತ್ತಿದೆ.