ರಾಮನಗರ: ಪ್ರತಿಭಾ ಕಾರಂಜಿ ತಾಲೀಮು ವೇಳೆ ಬೆಂಕಿ ತಗುಲಿಳಿ ವಿದ್ಯಾರ್ಥಿ ಗಾಯಗೊಂಡ ಘಟನೆ ರಾಮನಗರ ತಾಲೂಕಿನ ಲಕ್ಷ್ಮಿಪುರದಲ್ಲಿ ನಡೆದಿದೆ.
12 ವರ್ಷದ ಪ್ರೀತಮ್ ಗಾಯಗೊಂಡ ವಿದ್ಯಾರ್ಥಿ. ದೊಡ್ಡಸೂಲಿಕೆರೆ ಗ್ರಾಮದ ಪ್ರೀತಮ್ ಲಕ್ಷ್ಮಿಪುರ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದಾನೆ. ಪ್ರತಿಭಾ ಕಾರಂಜಿ ಪ್ರಯುಕ್ತ ಕಲಾ ಪ್ರದರ್ಶನ ನೀಡಲು ತಾಲೀಮು ನಡೆಯುವಾಗ ವೀರಗಾಸೆ ಪ್ರದರ್ಶನದಲ್ಲಿ ವೃತ್ತಾಕಾರದಲ್ಲಿ ಬೆಂಕಿ ಹಚ್ಚಲು ಪೆಟ್ರೋಲ್ ಬಳಕೆ ಮಾಡಲಾಗಿದೆ.
ಅದಕ್ಕೆ ಹೊತ್ತಿಸಿದ್ದ ಬೆಂಕಿ ತಗುಲಿ ವಿದ್ಯಾರ್ಥಿ ಪ್ರೀತಮ್ ಕಣ್ಣು, ಮುಖ, ತಲೆ ಭಾಗಕ್ಕೆ ಸುಟ್ಟ ಗಾಯಗಳಾಗಿವೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲೆಯ ಶಿಕ್ಷಕರು ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡದೆ ಜಿಲ್ಲಾಸ್ಪತ್ರೆಗೆ ಬಾಲಕನನ್ನು ದಾಖಲಿಸಿದ್ದಾರೆ. ಆಸ್ಪತ್ರೆಗೆ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಶಾಲೆ ಆವರಣದಲ್ಲಿ ಪೆಟ್ರೋಲ್ ಬಳಕೆ ಮಾಡಿದ ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.