ಭೂಕಂಪನದ ಸಮಯದಲ್ಲಿ ಶಾಲಾ ತರಗತಿಯೊಂದರಲ್ಲಿ ಕುಳಿತಿದ್ದ ಬಾಲಕ ತನ್ನ ಸ್ನೇಹಿತನಿಗೆ ಮಾಡಿರುವ ಸಹಾಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಭೂಕಂಪದ ಸಮಯದಲ್ಲಿ ಎಲ್ಲರೂ ಓಟಕ್ಕಿತ್ತರೆ ಒಬ್ಬ ವಿದ್ಯಾರ್ಥಿ ಮಾತ್ರ ತನ್ನ ಅಂಗವಿಕಲ ಸ್ನೇಹಿತನನ್ನು ಒಬ್ಬಂಟಿಯಾಗಿ ಬಿಡದೆ ತನ್ನ ಹೆಗಲ ಮೇಲೆ ಹೊತ್ತು ಸಾಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ಆನ್ಲೈನ್ನಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಯಿತು. ಸೆಪ್ಟೆಂಬರ್ 12 ರಂದು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆದರೆ, ಈ ಘಟನೆ ಎಲ್ಲಿ ನಡೆಯಿತು ಎಂಬುದು ತಿಳಿದು ಬಂದಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಸಿಸಿ ಟಿವಿ ದೃಶ್ಯಾವಳಿಯಾಗಿದೆ. ಶಾಲೆಯೊಂದರ ತರಗತಿಯಲ್ಲಿ ಈ ಘಟನೆ ನಡೆದಿದೆ. ಭೂಕಂಪದ ಸಮಯದಲ್ಲಿ ವಿದ್ಯಾರ್ಥಿಗಳು ತರಗತಿಯನ್ನು ಬಿಟ್ಟು ಓಡುತ್ತಿದ್ದರೆ ಒಬ್ಬ ವಿದ್ಯಾರ್ಥಿ ಮಾತ್ರ ತನ್ನ ಸಹಪಾಠಿಯ ಬಳಿ ತೆರಳಿ ಆತನನ್ನು ತನ್ನ ಹೆಗಲ ಮೇಲೆ ಹೊತ್ತೊಯ್ದಿದ್ದಾನೆ. ಇದು ನೆಟ್ಟಿಗರ ಹೃದಯ ಗೆದ್ದಿದೆ.