
ಶಿವಮೊಗ್ಗ: ತಂದೆ ಸಾವಿನ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ ಶೇಕಡ 70ರಷ್ಟು ಅಂಕ ಗಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಗೇರುಪುರ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿನಿ ಆರ್ಶಿಯಾ ಮನಿಯಾರ್ ಮನೆಯ ಪರೀಕ್ಷೆ ನಡೆಯುವಾಗಲೇ ತಂದೆ ಕಳೆದುಕೊಂಡಿದ್ದರು. ಹೊಸನಗರದಿಂದ ಕೊಪ್ಪಳಕ್ಕೆ ಹೋಗಿ ಬಂದು ಆಂಗ್ಲ ವಿಷಯದ ಪರೀಕ್ಷೆ ಬರೆದಿದ್ದರು. ಅವರು ಕನ್ನಡ 81, ಇಂಗ್ಲಿಷ್ 80, ಹಿಂದಿ 93, ಗಣಿತ 57, ವಿಜ್ಞಾನ 48, ಸಮಾಜ ವಿಜ್ಞಾನ 77 ಅಂಕ ಪಡೆದಿದ್ದಾರೆ. ತಂದೆಯ ಸಾವಿನ ನಡುವೆಯೂ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿನಿಗೆ ಶಾಲೆಯ ಪ್ರಾಂಶುಪಾಲರು ಹಾಗೂ ಬೋಧಕರು, ಸಿಬ್ಬಂದಿ ಅಭಿನಂದಿಸಿದ್ದಾರೆ.