ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಹಾಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮಾಟ್ವಾರಾ ಗ್ರಾಮದಲ್ಲಿ ಮೊಬೈಲ್ ಸ್ಪೋಟಗೊಂಡು ಬಾಲಕನೊಬ್ಬ ಮೃತಪಟ್ಟಿದ್ದಾನೆ.
ಮೊಬೈಲ್ ಚಾರ್ಜ್ ಆಗುತ್ತಿದ್ದ ವೇಳೆಯಲ್ಲಿ 12 ವರ್ಷದ ಬಾಲಕ ಮೋನು ಕುತೂಹಲದಿಂದ ಚಾರ್ಜ್ ಆಗಿದೆಯೇ ಇಲ್ಲವೇ ಎಂಬುದನ್ನು ಗಮನಿಸಲು ಹೋಗಿದ್ದಾನೆ. ಈ ವೇಳೆ ಏಕಾಏಕಿ ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಆತನ ಮುಖ ಛಿದ್ರವಾಗಿ ದೇಹದ ಭಾಗಗಳಿಗೆ ಹಾನಿಯಾಗಿದೆ. ಕೂಡಲೇ ಬಾಲಕನನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದ್ದು, ಈ ವೇಳೆಗಾಗಲೇ ಬಾಲಕ ಮೃತಪಟ್ಟಿದ್ದಾನೆನ್ನಲಾಗಿದೆ.
ಪೊಲೀಸರಿಗೆ ಮಾಹಿತಿ ನೀಡದೇ ಕುಟುಂಬದವರು ಬಾಲಕನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಮೊಬೈಲ್ ಬ್ಯಾಟರಿ ಸ್ಪೋಟದ ತೀವ್ರತೆಗೆ ಬಾಲಕನ ಮುಖ ಸೇರಿದಂತೆ ದೇಹದ ಭಾಗಗಳು ಛಿದ್ರಗೊಂಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.