
ಹಾವೇರಿ: ಚಾಕೊಲೇಟ್ ಎಂದು ತಿಳಿದು ಇಲಿ ಪಾಷಾಷಣ ಸೇವಿಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಹಾವೇರಿಯ ಇಜಾರಿ ಲಕಮಾಪುರದಲ್ಲಿ ನಡೆದಿದೆ.
ಪವಿತ್ರಾ ಮಡಿವಾಳ(15) ಮೃತಪಟ್ಟ ವಿದ್ಯಾರ್ಥಿನಿ. ಮನೆಯಲ್ಲಿ ಇಲಿಗಳ ಹಾವಳಿ ಹೆಚ್ಚಾಗಿದ್ದರಿಂದ ತಂದೆ ಇಲಿ ಪಾಷಾಣ ತಂದಿಟ್ಟಿದ್ದಾರೆ. ಪವಿತ್ರ ಅದರ ಪಕ್ಕದಲ್ಲಿ ಚಾಕೊಲೇಟ್ ಇಟ್ಟು ಶಾಲೆಗೆ ಹೋಗಿ ಬಂದಿದ್ದಾಳೆ. ಮಧ್ಯಾಹ್ನ ಪರೀಕ್ಷೆ ಮುಗಿಸಿ ಮನೆಗೆ ಬಂದ ಪವಿತ್ರಾ ಚಾಕೊಲೇಟ್ ಎಂದು ತಿಳಿದು ಪಾಷಾಣ ತಿಂದಿದ್ದಾಳೆ. ಇದರಿಂದಾಗಿ ಅಸ್ವಸ್ಥರಾಳಾದ ಪವಿತ್ರಾ ವಾಂತಿ ಮಾಡಿಕೊಂಡಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಗಿ ಎಂದು ತಂದೆ ದೂರು ನೀಡಿದ್ದಾರೆ.