ಮೈಸೂರು: ವಿದ್ಯಾರ್ಥಿಯೋರ್ವನನ್ನು ಕೊಲೆಗೈದು ನೇಣು ಹಾಕಿರುವ ಆರೋಪ ಕೇಳಿಬಂದಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರತ್ನಪುರಿ ಗ್ರಾಮದಲ್ಲಿ ವಿದ್ಯಾರ್ಥಿಯೋರ್ವನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮುತ್ತುರಾಜ್ ಎಂಬ ವಿದ್ಯಾರ್ಥಿ ಶವ ಪತ್ತೆಯಾಗಿದೆ. ಪೋಷಕರು ಹಾಗೂ ಕುಟುಂಬದವರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದರೆ, ಮುತ್ತುರಾಜ್ ದಾಸನಪುರದ ರವಿಕುಮಾರ್ ಹಾಗೂ ವಸಂತಾ ದಂಪತಿ ಪುತ್ರ.
ಅನ್ಯಕೋಮಿನ ಯುವತಿ ಜೊತೆ ಮಾತನಾಡಿದ್ದಕ್ಕೆ ಯುವತಿಯ ಕಡೆಯವರು ವಿದ್ಯಾರ್ಥಿಯನ್ನು ಕೊಲೆಗೈದು ನೇಣು ಹಾಕಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.