alex Certify ದೆಹಲಿಯಲ್ಲಿ ಉಸಿರುಗಟ್ಟಿಸಿದ ವಾತಾವರಣದ ನಡುವೆ ಪಂಜಾಬ್ ನಲ್ಲಿ ಮರುಕಳಿಸಿದ ಘಟನೆ: ಹುಲ್ಲಿಗೆ ಬೆಂಕಿ ಹಚ್ಚಿದ 1,251 ರೈತರ ವಿರುದ್ಧ ಕೇಸ್ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿಯಲ್ಲಿ ಉಸಿರುಗಟ್ಟಿಸಿದ ವಾತಾವರಣದ ನಡುವೆ ಪಂಜಾಬ್ ನಲ್ಲಿ ಮರುಕಳಿಸಿದ ಘಟನೆ: ಹುಲ್ಲಿಗೆ ಬೆಂಕಿ ಹಚ್ಚಿದ 1,251 ರೈತರ ವಿರುದ್ಧ ಕೇಸ್ ದಾಖಲು

ನವದೆಹಲಿ: ತೀವ್ರ ವಾಯುಮಾಲಿನ್ಯವು ರಾಷ್ಟ್ರ ರಾಜಧಾನಿ ದೆಹಲಿಯನ್ನು ಉಸಿರುಗಟ್ಟಿಸುತ್ತಿದ್ದಂತೆ ಪಂಜಾಬ್ ಸೋಮವಾರ 1,250 ಗದ್ದೆಯಲ್ಲಿ ಹುಲ್ಲು ಸುಡುವ ಪ್ರಕರಣಗಳನ್ನು ವರದಿ ಮಾಡಿದೆ.

ಇದು ಒಂದೇ ದಿನದಲ್ಲಿ ಸೀಸನ್‌ನ ಅತಿ ಹೆಚ್ಚು ಹುಲ್ಲು, ಕಸ, ಕಡ್ಡಿ, ಕೋಲು-ಸುಡುವಿಕೆಯ ಸಂಖ್ಯೆಯನ್ನು ಸೂಚಿಸುತ್ತದೆ. ಇದರೊಂದಿಗೆ ರಾಜ್ಯದಲ್ಲಿ ಹುಲ್ಲು ಸುಡುವ ಪ್ರಕರಣಗಳ ಒಟ್ಟು ಸಂಖ್ಯೆ 9,655 ಕ್ಕೆ ತಲುಪಿದೆ.

ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯಕ್ಕೆ ಗದ್ದೆಯಲ್ಲಿ ಹುಲ್ಲು ಸುಡುವಿಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ನವೆಂಬರ್ 6 ರಂದು ಕೇಂದ್ರ ಸರ್ಕಾರವು ಬೆಳೆ ಅವಶೇಷಗಳನ್ನು ಸುಡುವ ರೈತರಿಗೆ ದಂಡವನ್ನು ದ್ವಿಗುಣಗೊಳಿಸಿದೆ.

ಐದು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರಿಗೆ ದಂಡವನ್ನು 30,000 ರೂ., ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು 2,500 ರೂ.ನಿಂದ 5,000 ರೂ.ಗಳ ಪರಿಸರ ಪರಿಹಾರವನ್ನು ಪಾವತಿಸಬೇಕಾಗುತ್ತದೆ. ಇವತ್ತು ಒಂದೇ ದಿನ 1250 ಹುಲ್ಲು ಸುಟ್ಟವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...