ಉತ್ತರ ಪ್ರದೇಶದಲ್ಲಿ ನಡೆದ ರಾಜಕೀಯ ರ್ಯಾಲಿಯಲ್ಲಿ ಶಿವಸೇನೆ ಕಾರ್ಯಕರ್ತನೊಬ್ಬ ಮಾಸ್ಕ್ ಧರಿಸಲು ತಿಣುಕಾಡಿದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಗೋರಖ್‌ಪುರದಲ್ಲಿ ನಡೆದ ಶಿವಸೇನೆ ರ್ಯಾಲಿಯಲ್ಲಿ ವ್ಯಕ್ತಿಯೊಬ್ಬರು ಎನ್-95 ಮುಖವಾಡವನ್ನು ಧರಿಸಲು ಪ್ರಯತ್ನಿಸುತ್ತಿರುವುದು ಮತ್ತು ಅದನ್ನು ಸರಿಯಾಗಿ ಹಾಕಿಕೊಳ್ಳಲು ವಿಫಲರಾಗುವ ವಿಡಿಯೋ ಜನಸಾಮಾನ್ಯರನ್ನು ನಗೆಗಡಲಲ್ಲಿ ತೇಲಿಸುತ್ತಿದೆ.
ಕಾಮದ ಮದದಲ್ಲಿ ಹೇಯಕೃತ್ಯ: ತಡರಾತ್ರಿ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಯುವಕ ಅರೆಸ್ಟ್
ಎರಡು ನಿಮಿಷಗಳ ವಿಡಿಯೊದಲ್ಲಿ ಶಿವಸೇನೆ ಸಂಸದ ಧೈರ್ಯಶೀಲ್ ಮಾನೆ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಹಿಂದೆ ಕಾಣಿಸಿದ ಕಾರ್ಯಕರ್ತ ಮಾಸ್ಕ್ ಧರಿಸುವುದು ಹೇಗೆಂದು ಗೊಂದಲಕ್ಕೊಳಗಾದನು. ಒಮ್ಮೆ ಹಣೆ, ಕಣ್ಣು ಮುಚ್ಚಿಕೊಂಡು ಅಂತಿಮವಾಗಿ, ವೇದಿಕೆಯಲ್ಲಿ ಇನ್ನೊಬ್ಬ ಸಹಾಯಕರ ಸಹಾಯ ಪಡೆದ ನಂತರ, ಮಾಸ್ಕ್ ಸರಿಯಾಗಿ ಧರಿಸುವಲ್ಲಿ ಯಶಸ್ವಿಯಾದರು.
ಚುನಾವಣೆಯ ಗದ್ದಲದ ನಡುವೆ ಈ ಉಲ್ಲಾಸಮಯ ಕ್ಷಣವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೂಲ ವಿಡಿಯೋಗೆ ಒಂದಷ್ಟು ಎಡಿಟಿಂಗ್ ರೂಪದಲ್ಲೂ ಹರಿದಾಡುತ್ತಿದೆ. ಯಾರೋ ಒಬ್ಬರು ಸ್ಪೂಫ್ ವಿಡಿಯೊವನ್ನು ರಚಿಸಿದ್ದಾರೆ, ಕ್ಲಿಪ್‌ನಲ್ಲಿ ಡಾನ್‌ನ ಶೀರ್ಷಿಕೆ ಸಂಗೀತವನ್ನು ಪೂರ್ವದಲ್ಲಿ ಸೇರಿಸಿದ್ದಾರೆ, ಅಂತಿಮವಾಗಿ ಮುಖವಾಡವನ್ನು ಧರಿಸುವಲ್ಲಿ ವ್ಯಕ್ತಿ ಯಶಸ್ವಿಯಾಗುತ್ತಿದ್ದಂತೆ ಪ್ರೇಕ್ಷಕರು ಸಂಭ್ರಮಿಸುತ್ತಿದ್ದ ಸ್ಟಾಕ್ ಫೂಟೇಜ್ ಅನ್ನು ಸೇರಿಸಿದ್ದಾರೆ. ಒಟ್ಟಾರೆ ಖುಷಿಪಡಲು ಇದನ್ನು ಬಳಸಿದ್ದಾರೆ.
‘Struggle is real’: Shiv Sena worker scrambles to wear face mask properly, inspires hilarious spoof video