ವಿದೇಶಗಳಿಗೆ ಪ್ರಯಾಣಿಸಲು ಪಾಸ್‌ಪೋರ್ಟ್ ಬೇಕೇ ಬೇಕು. ಕೆಲವೊಂದು ದೇಶಗಳ ಪಾಸ್ಪೋರ್ಟ್‌ಗಳಂತೂ ಬಹಳ ಪವರ್ಫುಲ್ಲಾಗಿರುತ್ತವೆ. ಅವುಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುವುದೇ ಇಲ್ಲ. ಅಂತಹ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿ ಬಿಡುಗಡೆಯಾಗಿದೆ.
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಷ್ಟ್ರಗಳೆಂದರೆ ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ ಮತ್ತು ಸ್ಪೇನ್. ಈ ದೇಶಗಳ ನಾಗರಿಕರು ಒಟ್ಟು 194 ದೇಶಗಳಲ್ಲಿ ವೀಸಾ ಮುಕ್ತ ಪ್ರವೇಶದ ಸೌಲಭ್ಯವನ್ನು ಪಡೆಯುತ್ತಿದ್ದಾರೆ.
ದಕ್ಷಿಣ ಕೊರಿಯಾ, ಸ್ವೀಡನ್ ಮತ್ತು ಫಿನ್‌ಲ್ಯಾಂಡ್‌ನ ನಾಗರಿಕರು ಒಟ್ಟು 193 ದೇಶಗಳಲ್ಲಿ ವೀಸಾ ಮುಕ್ತ ಪ್ರವೇಶದ ಸೌಲಭ್ಯವನ್ನು ಪಡೆಯುತ್ತಾರೆ. ಆಸ್ಟ್ರಿಯಾ, ಡೆನ್ಮಾರ್ಕ್, ಐರ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಹೆಸರು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಪಾಸ್‌ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ ಒಟ್ಟು 192 ದೇಶಗಳಿಗೆ ಪ್ರಯಾಣಿಸಬಹುದು.
ಬೆಲ್ಜಿಯಂ, ಲಕ್ಸೆಂಬರ್ಗ್, ನಾರ್ವೆ, ಪೋರ್ಚುಗಲ್, ಯುಕೆ ಪಾಸ್‌ಪೋರ್ಟ್‌ಗಳು ನಾಲ್ಕನೇ ಸ್ಥಾನದಲ್ಲಿವೆ. ಈ ದೇಶಗಳ ಪಾಸ್‌ಪೋರ್ಟ್ ಹೊಂದಿರುವವರಿಗೆ ಒಟ್ಟು 191 ದೇಶಗಳಲ್ಲಿ ವೀಸಾ ಮುಕ್ತ ಪ್ರವೇಶವಿದೆ. 190 ದೇಶಗಳಲ್ಲಿ ವೀಸಾ ಮುಕ್ತ ಪ್ರವೇಶದೊಂದಿಗೆ ಗ್ರೀಸ್, ಮಾಲ್ಟಾ, ಸ್ವಿಟ್ಜರ್ಲೆಂಡ್‌ನ ಹೆಸರುಗಳು ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿವೆ.
ಜೆಕ್ ರಿಪಬ್ಲಿಕ್, ನ್ಯೂಜಿಲೆಂಡ್ ಮತ್ತು ಪೋಲೆಂಡ್‌ನ ಪಾಸ್‌ಪೋರ್ಟ್ ಹೊಂದಿರುವವರು ಒಟ್ಟು 189 ದೇಶಗಳಲ್ಲಿ ವೀಸಾ ಮುಕ್ತ ಪ್ರವೇಶದ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಈ ದೇಶಗಳ ಪಾಸ್‌ಪೋರ್ಟ್ ವಿಶ್ವದ ಆರನೇ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಆಗಿದೆ.
ಕೆನಡಾ, ಹಂಗೇರಿ ಮತ್ತು ಅಮೆರಿಕದ ಪಾಸ್‌ಪೋರ್ಟ್‌ಗಳ ಮೂಲಕ ಒಟ್ಟು 188 ದೇಶಗಳಿಗೆ ಜನರು ವೀಸಾ ಮುಕ್ತ ಪ್ರವೇಶವನ್ನು ಪಡೆಯಬಹುದು. ಈ ದೇಶಗಳ ಪಾಸ್ಪೋರ್ಟ್ 7 ನೇ ಸ್ಥಾನದಲ್ಲಿದೆ.
ವಿಶ್ವದ ಶಕ್ತಿಶಾಲಿ ಪಾಸ್ಪೋರ್ಟ್‌ಗಳ ಪೈಕಿ ಎಸ್ಟೋನಿಯಾ ಮತ್ತು ಲಿಥುವೇನಿಯಾ ದೇಶಗಳು 8ನೇ ಸ್ಥಾನದಲ್ಲಿವೆ. 187 ದೇಶಗಳಿಗೆ ಇವರು ವೀಸಾ ಮುಕ್ತ ಪ್ರವೇಶ ಹೊಂದಿದ್ದಾರೆ. ಲಾಟ್ವಿಯಾ, ಸ್ಲೋವಾಕಿಯಾ ಮತ್ತು ಸ್ಲೊವೇನಿಯಾ ಹೆಸರುಗಳು ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿವೆ.
ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್‌ನಲ್ಲಿ ಭಾರತ 80ನೇ ಸ್ಥಾನದಲ್ಲಿದೆ. ಭಾರತದ ಜೊತೆಗೆ ಉಜ್ಬೇಕಿಸ್ತಾನ್ ಹೆಸರೂ ಸೇರಿದೆ. ಭಾರತದ ನಾಗರಿಕರು ವೀಸಾ ಇಲ್ಲದೆ 62 ದೇಶಗಳಿಗೆ ಪ್ರಯಾಣಿಸಬಹುದು.
ಆದರೆ ಈ ಪಟ್ಟಿಯಲ್ಲಿ ಪಾಕಿಸ್ತಾನ 101ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನವು ವಿಶ್ವದಲ್ಲೇ ಅತ್ಯಂತ ದುರ್ಬಲ ಪಾಸ್‌ಪೋರ್ಟ್ ಹೊಂದಿದೆ. ಇಲ್ಲಿ ಪಾಸ್‌ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ 28 ದೇಶಗಳಿಗೆ ಮಾತ್ರ ಪ್ರಯಾಣಿಸಬಹುದು.