ವಾಷಿಂಗ್ಟನ್: ಮೊರಾಕ್ಕೊದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ.
ಪ್ರವಾಸಿ ತಾಣ ಮರಕೇಶ್ನ ನೈಋತ್ಯಕ್ಕೆ 72 ಕಿಲೋಮೀಟರ್ (45 ಮೈಲಿ) ದೂರದಲ್ಲಿ ರಾತ್ರಿ 11:11 ಕ್ಕೆ (2211 ಜಿಎಂಟಿ) 6.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ.
ಕರಾವಳಿ ನಗರಗಳಾದ ರಬಾತ್, ಕಾಸಾಬ್ಲಾಂಕಾ ಮತ್ತು ಎಸ್ಸೌಯಿರಾದಲ್ಲಿಯೂ ಪ್ರಬಲ ಭೂಕಂಪನದ ಅನುಭವವಾಗಿದೆ. ಭೀಕರ ಭೂಕಂಪದಲ್ಲಿ ಇನ್ನೂ 329 ಜನರು ಗಾಯಗೊಂಡಿದ್ದು, 51 ಜನರ ಸ್ಥಿತಿ ಗಂಭೀರವಾಗಿದೆ ಎಂದು ಸಚಿವಾಲಯ ತಿಳಿಸಿದೆ.