2021 ಮುಗಿಯಲು ಇನ್ನು ಮೂರು ತಿಂಗಳು ಬಾಕಿ ಇದೆ. ಈ ವರ್ಷ ಸಾಕಷ್ಟು ಏರಿಳಿತಗಳನ್ನು ನೋಡಿದ ಜನರು, ಬರುವ ವರ್ಷವಾದ್ರೂ ಚೆನ್ನಾಗಿರಲೆಂದು ಬೇಡಿಕೊಳ್ತಿದ್ದಾರೆ. ಆದ್ರೆ ಕೆಲ ರಾಶಿಯವರು ಮುಂದಿನ ವರ್ಷದವರೆಗೆ ಕಾಯಬೇಕಾಗಿಲ್ಲ. 9 ತಿಂಗಳಲ್ಲಿ ಕಾಣದ ಶುಭ ಫಲ ಅವರಿಗೆ ಮುಂದಿನ ಮೂರು ತಿಂಗಳಲ್ಲಿ ಸಿಗಲಿದೆ.
ಮುಂದಿನ ಮೂರು ತಿಂಗಳಲ್ಲಿ ಅನೇಕ ಗ್ರಹಗಳು ತಮ್ಮ ರಾಶಿ ಬದಲಿಸುತ್ತಿವೆ. ಇದು ಎಲ್ಲ ರಾಶಿಯ ಮೇಲೆ ಪರಿಣಾಮ ಬೀರಲಿದೆ. ನಾಲ್ಕು ರಾಶಿಯವರ ಅದೃಷ್ಟ ಬದಲಾಗಲಿದೆ.
ಮೇಷ ರಾಶಿಯವರು ಮುಂದಿನ ಮೂರು ತಿಂಗಳಲ್ಲಿ ಸಾಕಷ್ಟು ಬದಲಾವಣೆ ಕಾಣಲಿದ್ದಾರೆ. ಮುಂದಿನ 3 ತಿಂಗಳಲ್ಲಿ ಬಡ್ತಿ ಸಿಗಲಿದೆ. ಉದ್ಯೋಗದಲ್ಲಿ ಅಪೇಕ್ಷಿತ ಬದಲಾವಣೆಯಾಗಲಿದೆ. ಆರ್ಥಿಕ ವೃದ್ಧಿಯಾಗಲಿದೆ.
ಇನ್ನು ವೃಷಭ ರಾಶಿಯವರು ಕೂಡ ಸಾಕಷ್ಟು ಖುಷಿ, ಸಂತೋಷ ಅನುಭವಿಸಲಿದ್ದಾರೆ. ನವೆಂಬರ್ ಎರಡನೇ ಭಾಗ ಅವರಿಗೆ ಉತ್ತಮವಾಗಿರಲಿದೆ. ವೃತ್ತಿಯಲ್ಲಿ ಪ್ರಗತಿ, ಹಣಕಾಸಿನ ಪ್ರಯೋಜನ ಸಿಗಲಿದೆ. ಆದಾಯ ಮತ್ತು ಖರ್ಚಿನ ಮಧ್ಯೆ ಸಮತೋಲನ ಕಾಯ್ದುಕೊಳ್ಳುವ ಅವಶ್ಯಕತೆಯಿದೆ.
ಮಕರ ರಾಶಿಯವರ ಹೋರಾಟ ಕೊನೆಗೊಳ್ಳಲಿದೆ. ಅಕ್ಟೋಬರ್ ನಂತ್ರ ಅವರ ಅದೃಷ್ಟ ಬದಲಾಗಲಿದೆ. ವೃತ್ತಿ ಜೀವನದಲ್ಲಿ ಸುಧಾರಣೆ ಕಾಣಲಿದ್ದು, ಆದಾಯ ಹೆಚ್ಚಾಗಲಿದೆ.
ಕುಂಭ ರಾಶಿಯ ಜನರು, ವೃತ್ತಿಯಲ್ಲಿ ಪ್ರಗತಿ ಸಾಧಿಸಲಿದ್ದಾರೆ. ವ್ಯಾಪಾರದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಅಕ್ಟೋಬರ್ ದ್ವಿತೀಯಾರ್ಧದಲ್ಲಿ ದೊಡ್ಡ ಲಾಭ ಸಿಗಲಿದೆ. ಜೀವನದಲ್ಲಿ ಸಂತೋಷ ನೆಲೆಸಲಿದೆ.