ನವದೆಹಲಿ: ಭಾರತದಲ್ಲಿ ಸಾವಿಗೆ ಎರಡನೇ ಸಾಮಾನ್ಯ ಕಾರಣವಾದ ಪಾರ್ಶ್ವವಾಯು. ಪ್ರತಿ 4 ನಿಮಿಷಕ್ಕೆ ಒಬ್ಬ ವ್ಯಕ್ತಿಯ ಜೀವವನ್ನು ಇದು ಪಡೆಯುತ್ತಿದೆ ಎಂದು ಏಮ್ಸ್ ನರವಿಜ್ಞಾನಿ ಪ್ರೊ.ಎಂ.ವಿ ಪದ್ಮಾ ಶ್ರೀವಾಸ್ತವ ಹೇಳಿದ್ದಾರೆ.
“ಭಾರತದಲ್ಲಿ ಪ್ರತಿ ವರ್ಷ ಸುಮಾರು 1,85,000 ಪಾರ್ಶ್ವವಾಯು ಸಂಭವಿಸುತ್ತದೆ ಮತ್ತು ಪ್ರತಿ 40 ಸೆಕೆಂಡಿಗೆ ಒಂದು ಪಾರ್ಶ್ವವಾಯು ಸಂಭವಿಸುತ್ತದೆ” ಎಂದು ಅವರು ತಿಳಿಸಿದ್ದಾರೆ.
ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (GBD) ಪ್ರಕಾರ, ಭಾರತದಲ್ಲಿ ಶೇಕಡಾ 68.6 ರಷ್ಟು ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದರೆ, ಆ ಪೈಕಿ 70.9 ಪ್ರತಿಶತದಷ್ಟು ಜನರು ಸಾಯುತ್ತಿದ್ದಾರೆ ಮತ್ತು 77.7ರಷ್ಟು ಮಂದಿ ಅಂಗವೈಕಲ್ಯ ಹೊಂದುತ್ತಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ಕಿರಿಯ ಮತ್ತು ಮಧ್ಯವಯಸ್ಕ ಜನರಲ್ಲಿ ಸ್ಟ್ರೋಕ್ ಹೊರೆ ಹೆಚ್ಚಾಗಿರುತ್ತದೆ. GBD ವಿಶ್ಲೇಷಣೆಯು 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸುಮಾರು 5.2 ಮಿಲಿಯನ್ (31 ಪ್ರತಿಶತ) ಪಾರ್ಶ್ವವಾಯು ಎಂದು ತೋರಿಸಿದೆ. ಸ್ಟ್ರೋಕ್ ರೋಗಿಗಳಿಗೆ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಅಗತ್ಯವಾದ ಮೂಲಸೌಕರ್ಯ ಮತ್ತು ಸಂಘಟನೆಯನ್ನು ಹಲವು ದೇಶಗಳು ಹೊಂದಿಲ್ಲ ಎಂದು ಅದು ಹೇಳಿದೆ.