ಚಾಲನಾ ಪರವಾನಗಿ ಇನ್ಮುಂದೆ ಸುಲಭವಾಗಿ ಸಿಗುವುದಿಲ್ಲ. ಚಾಲನಾ ಪರವಾನಗಿ ಪಡೆಯಲು ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅತ್ಯಗತ್ಯವಾಗಿದೆ. 69 ರಷ್ಟು ಅಂಕಗಳನ್ನು ಪಡೆದವರಿಗೆ ಮಾತ್ರ ಪರವಾನಗಿ ನೀಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಲೋಕಸಭೆಗೆ ತಿಳಿಸಿದ್ದಾರೆ.
ರಸ್ತೆ ಅಪಘಾತಗಳನ್ನು ತಡೆಯಲು ಮತ್ತು ನುರಿತ ಚಾಲಕರಿಗೆ ಪರವಾನಗಿ ನೀಡಲು ಪರೀಕ್ಷೆಯನ್ನು ಕಠಿಣಗೊಳಿಸಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಗಡ್ಕರಿ, ಪರವಾನಗಿ ಕಠಿಣವಾಗಿರಲಿದೆ ಎಂದಿದ್ದಾರೆ. ವಾಹನವು ರಿವರ್ಸ್ ಗೇರ್ ಹೊಂದಿದ್ದರೆ ಬಲ ಮತ್ತು ಎಡಭಾಗದಲ್ಲಿರುವ ಸೀಮಿತ ಜಾಗದಲ್ಲಿ ಕಾರನ್ನು ಸಮರ್ಪಕವಾಗಿ ಹಿಂದಕ್ಕೆ ತೆಗೆದುಕೊಳ್ಳುವುದು ಸೇರಿದಂತೆ ಅರ್ಜಿದಾರರಿಗೆ ಅನೇಕ ಪರೀಕ್ಷೆ ನಡೆಯಲಿದೆ ಎಂದು ಗಡ್ಕರಿ ಹೇಳಿದ್ದಾರೆ.
ಇದು ಸೆಂಟ್ರಲ್ ಮೋಟಾರು ವಾಹನ ನಿಯಮ 1989 ರ ನಿಬಂಧನೆಗಳ ಅಡಿಯಲ್ಲಿದೆ. ಪರೀಕ್ಷೆಗೆ ಮೊದಲು ಟ್ರ್ಯಾಕ್ ನಲ್ಲಿ ಹಾಕಿರುವ ಎಲ್ಇಡಿ ಪರದೆ ಮೇಲೆ ಒಂದು ವಿಡಿಯೋ ಪ್ರಸಾರವಾಗಲಿದೆ. ನೇಮಕಾತಿ ಸಮಯದಲ್ಲಿ ಅರ್ಜಿದಾರರಿಗೆ ಪರೀಕ್ಷೆ ಡೆಮೊಗಾಗಿ ವೀಡಿಯೊ ಲಿಂಕ್ ಕೂಡ ನೀಡಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ.
ಚಾಲನಾ ಪರವಾನಗಿ ಮತ್ತು ನೋಂದಣಿ ಪ್ರಮಾಣಪತ್ರಗಳಿಗೆ ಸಂಬಂಧಿಸಿದ ಕೆಲವು ಸೇವೆಗಳನ್ನು ಆಧಾರ್ ದೃಡೀಕರಣದ ಸಹಾಯದಿಂದ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ ಎಂದು ಗಡ್ಕರಿ ಹೇಳಿದ್ದಾರೆ. ಇದ್ರಿಂದ ಆರ್ ಟಿಒ ಕಚೇರಿಯಲ್ಲಿ ಜನಜಂಗುಳಿ ತಪ್ಪಲಿದೆ. ಆರ್ ಟಿಒ ಅಧಿಕಾರಿಗಳ ದಕ್ಷತೆ ಹೆಚ್ಚಾಗಲಿದೆ ಎಂದಿದ್ದಾರೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ ಎಂದು ಗಡ್ಕರಿ ಹೇಳಿದ್ದಾರೆ.