ಇರಾನ್ನಲ್ಲಿ ಪ್ರತಿಭಟನೆಯ ಕಿಚ್ಚು ಧಗಧಗನೆ ಹೊತ್ತಿ ಉರಿಯುತ್ತಿದೆ. ಮಹಿಳೆಯರು ರಸ್ತೆಗಿಳಿದು ಹಿಜಾಬ್ನಿಂದ ಹಿಡಿದು ತಮ್ಮ ಮೇಲೆ ಹೇರಿರುವ ಇತರೆ ಕಾನೂನನ್ನ ವಿರೋಧಿಸಿ ದನಿಎತ್ತಿದ್ದಾರೆ.
ಕೆಲವೇ ಕೆಲ ದಿನಗಳ ಹಿಂದಿನ ಮಾತು ಹಿಜಾಬ್ ಧರಿಸದಿದ್ದಕ್ಕಾಗಿ ಯುವತಿಯೊಬ್ಬಳನ್ನಇರಾನ್ ಪೊಲೀಸರು ಬಂಧಿಸಿ ಹಿಗ್ಗಾಮುಗ್ಗ ಥಳಿಸಿದ್ದರು. ಅವರ ಹೊಡೆತವನ್ನ ತಾಳಲಾರದೇ ಆಕೆ ಕೆಲ ದಿನಗಳ ನಂತರ ಮೃತಪಟ್ಟಿದ್ದಳು.
ಈ ಘಟನೆಯ ನಂತರ ಇರಾನ್ನಲ್ಲಿ ಮಹಿಳೆಯರು ಹಿಂದೆಂದೂ ಕಾಣದ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹಿಜಾಬ್ಗಳನ್ನು ಸಾರ್ವಜನಿಕವಾಗಿ ಸುಡುತ್ತಿದ್ದಾರೆ. ಅಸಲಿಗೆ ಹೆಣ್ಣುಮಕ್ಕಳ ವಿರುದ್ಧವಾಗಿರುವ ಇಲ್ಲಿನ ಒಂದೊಂದೇ ಕಾನೂನುಗಳನ್ನ ಕೇಳುತ್ತಿದ್ದರೆ ಎಂಥವರೂ ಕೂಡಾ ಶಾಕ್ ಆಗುತ್ತಾರೆ.
ಇರಾನ್ನಲ್ಲಿ ಹೆಣ್ಣುಮಕ್ಕಳಿಗೆ ಇರುವ ಕಾನೂನು ನೋಡ್ತಿದ್ರೆ, ಅದು ಮನುಷ್ಯರಿಗಾ ಇಲ್ಲಾ ಪ್ರಾಣಿಗಳಿಗಾ ಅನ್ನುವ ಹಾಗಿದೆ. ಇಷ್ಟು ವರ್ಷಗಳವರೆಗೆ ಇಂಥ ಅತ್ಯಾಚಾರ, ಅನಾಚಾರ, ದೌರ್ಜನ್ಯ, ಹಿಂಸೆಗಳನ್ನು ಅನುಭವಿಸುತ್ತಾ ಬಂದಿರುವ ಹೆಣ್ಣುಮಕ್ಕಳು ಇವುಗಳಿಂದ ಬಿಡುಗಡೆ ಪಡೆಯಲು ಹಿಜಾಬ್ನ ಮುಂದಿಟ್ಟುಕೊಂಡು ಪ್ರತಿಭಟನೆಗೆ ಮುಂದಾಗಿದ್ದಾರೆ.
ಇರಾನ್ನಲ್ಲಿ ಹೆಣ್ಣುಮಕ್ಕಳಿಗೆಂದೇ ಜಾರಿಯಲ್ಲಿರುವ ಅತ್ಯಂತ ಅಸಹ್ಯಕಾರಿ ಕಾನೂನು ಅಂದರೆ ಮಗಳನ್ನೇ ಮದುವೆಯಾಗಲು ತಂದೆಗೆ ಒಪ್ಪಿಗೆ ಇದೆ. ಆದರೆ ಆಕೆ ಹೆತ್ತಮಗಳಾಗಿರಬಾರದು ಅಷ್ಟೆ.
ಅಂದರೆ ದತ್ತು ಪುತ್ರಿಯನ್ನ ಮದುವೆ ಆಗುವ ಅವಕಾಶ ಇಲ್ಲಿನ ಪುರುಷರಿಗೆ ಇದೆ. ಇದೇ ಕಾನೂನನ್ನ ಇಲ್ಲಿನ ಪುರುಷರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪುಟ್ಟ-ಪುಟ್ಟ ಹೆಣ್ಣು ಮಕ್ಕಳನ್ನ ದತ್ತು ರೂಪದಲ್ಲಿ ಪಡೆದು ಕೊನೆಗೆ ಅವರನ್ನೇ ಮದುವೆಯಾಗುತ್ತಿದ್ದಾರೆ. ಇದು ಇಲ್ಲಿ ದಂಧೆಯಂತಾಗಿ ಬಿಟ್ಟಿದೆ.
ಈ ಹಿಂದೆ ಈ ಕಾನೂನು ಕುರಿತು ಹೆಣ್ಣುಮಕ್ಕಳು ದನಿ ಎತ್ತಿದ್ದರು. ಇದರ ಫಲವಾಗಿಯೇ 2013ರಲ್ಲಿ ಇರಾನ್ ಸಂಸತ್ತು , ಈ ಕಾನೂನನ್ನು ರದ್ದುಗೊಳಿಸಿತ್ತು. ಆದರೆ ಧಾರ್ಮಿಕ ಮುಖಂಡರು ಈ ಕಾನೂನನ್ನು ರದ್ದುಗೊಳಿಸುವುದಕ್ಕೆ ಅವಕಾಶ ನೀಡಲಿಲ್ಲ ಅದಕ್ಕಾಗಿಯೇ ಈ ಕಾನೂನಿಗೆ ಅನುಮೋದನೆ ಸಿಗಲಿಲ್ಲ.