ಬೆಂಗಳೂರು: ಮುಷ್ಕರದ ದಿನ ಕೆಲಸ ಮಾಡುವ ನೌಕರರ ಕಟೌಟ್ ಗೆ ಚಪ್ಪಲಿ ಹಾರ ಹಾಕುವುದಾಗಿ ಸಾರಿಗೆ ನೌಕರರ ಕೂಟದ ಅಧ್ಯಕ್ಷ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಅವರ ಈ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ ವ್ಯಕ್ತವಾಗಿದೆ. ಮುಷ್ಕರದ ದಿನ ಯಾರು ಬಸ್ ಚಾಲನೆ ಮಾಡಬಾರದು. ಹೆಲ್ಮೆಟ್ ಹಾಕಿಕೊಂಡು, ಮಾಸ್ಕ್ ಧರಿಸಿಕೊಂಡು, ಮುಖಕ್ಕೆ ಬಟ್ಟೆ ಸುತ್ತಿಕೊಂಡು ಕಾರ್ಯನಿರ್ವಹಿಸುವ ನೌಕರರ ಕಟೌಟ್ ಗೆ ಚಪ್ಪಲಿ ಹಾರ ಹಾಕಲಾಗುವುದು ಎಂದು ಅವರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಅವರ ಹೇಳಿಕೆ ವಿರುದ್ಧ ನೌಕರರ ವಲಯದಲ್ಲಿ ಪರ-ವಿರೋಧ ಚರ್ಚೆ ನಡೆದಿದೆ. ಮುಷ್ಕರಕ್ಕೆ ಬೆಂಬಲಿಸುವುದು ಅಥವಾ ಬಿಡುವುದು ನೌಕರರಿಗೆ ಬಿಟ್ಟ ವಿಚಾರವಾಗಿರುತ್ತದೆ. ನೌಕರರ ಬಗ್ಗೆ ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಲಾಗಿದೆ.