ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ಕೈಗೊಂಡಿರುವ ಅನಿರ್ಧಿಷ್ಟಾವಧಿ ಮುಷ್ಕರ ನಾಲ್ಕನೇ ದಿನವೂ ಮುಂದುವರೆದಿದೆ.
ಮುಷ್ಕರ ಕಾನೂನು ಬಾಹಿರ ಎಂದು ಸರ್ಕಾರ ಕಾನೂನು ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಇದಕ್ಕೆ ಜಗ್ಗದ ಸಾರಿಗೆ ನೌಕರರು ಮುಷ್ಕರ ಮುಂದುವರಿಸಿದ್ದಾರೆ. ಸಾಲು-ಸಾಲು ರಜೆ ಮತ್ತು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ಹೊರಟವರಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗಿದೆ.
ಈಶಾನ್ಯ ಸಾರಿಗೆ, ವಾಯುವ್ಯ ಕರ್ನಾಟಕ ಸಾರಿಗೆ, ಕೆಎಸ್ಸಾರ್ಟಿಸಿ, ಬಿಎಂಟಿಸಿ ನೌಕರರು ಮುಷ್ಕರ ಮುಂದುವರೆಸಿದ್ದಾರೆ. ನಾಲ್ಕನೇ ದಿನವೂ ಬಸ್ ವ್ಯವಸ್ಥೆ ಇಲ್ಲದೆ ಪ್ರಯಾಣಿಕರ ಪರದಾಟ ಮುಂದುವರೆದಿದೆ. ಸರ್ಕಾರಿ ನೌಕರರ ಮುಷ್ಕರ ಕಾನೂನುಬಾಹಿರ ಎಂದು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದ್ದು, ಮುಷ್ಕರ ನಿಷೇಧಿಸಿದೆ ವಿವಾದವನ್ನು ನಿರ್ಣಯಕ್ಕಾಗಿ ಕೈಗಾರಿಕಾ ಟ್ರಿಬ್ಯುನಲ್ ಗೆ ವರ್ಗಾಯಿಸಲಾಗಿದೆ.
ಸಾಲು ಸಾಲು ರಜೆ, ಯುಗಾದಿ ಹಬ್ಬದ ಕಾರಣ ಊರಿಗೆ ಹೊರಟವರಿಗೆ ತೊಂದರೆಯಾಗಿದೆ. ಬಸ್ ವ್ಯವಸ್ಥೆ ಇಲ್ಲದೇ ನಿಲ್ದಾಣಗಳಲ್ಲಿ ಕಾಯುವಂತಾಗಿದೆ. ದೂರದ ಊರುಗಳಿಗೆ ತೆರಳುವವರು ಖಾಸಗಿ ವಾಹನಗಳ ದುಬಾರಿ ಟಿಕೆಟ್ ದರ ಕೇಳಿ ಶಾಕ್ ಆಗುವಂತಾಗಿದೆ.