ಬೆಂಗಳೂರು: ಸಾರಿಗೆ ನೌಕರರು ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಕೈಗೊಂಡಿರುವ ಮುಷ್ಕರ ಮುಂದುವರೆದಿದೆ.
ವೇತನ ನೀಡದಿರುವ ಸರ್ಕಾರದ ಕ್ರಮ ಖಂಡಿಸಿ ಯುಗಾದಿ ದಿನವೇ ಭಿಕ್ಷಾಟನಾ ಚಳವಳಿ ಹಮ್ಮಿಕೊಳ್ಳಲಾಗಿದೆ. ಹಬ್ಬಕ್ಕೆ ವೇತನ ನೀಡಿಲ್ಲವೆಂದು ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಪ್ರಮುಖ ಜಂಕ್ಷನ್ ಗಳಲ್ಲಿ ಕುಟುಂಬದವರೊಂದಿಗೆ ತಟ್ಟೆ, ಲೋಟ ಹಿಡಿದು ಭಿಕ್ಷಾಟನೆ ಮಾಡಲು ನಿರ್ಧರಿಸಿದ್ದಾರೆ.
ವೇತನ ಹೆಚ್ಚಳ ಮಾಡುವವರೆಗೆ ಕರ್ತವ್ಯಕ್ಕೆ ಹಾಜರಾಗದಿರಲು ನೌಕರರು ತೀರ್ಮಾನಿಸಿದ್ದಾರೆ. ಸಾರಿಗೆ ನೌಕರರ ಹೋರಾಟ ಮುಂದುವರೆದಿದ್ದು, ಕೆಲವು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.