ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಕೈಗೊಂಡ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗಿದೆ.
ಕೂಲಿ ಕಾರ್ಮಿಕರು, ರೋಗಿಗಳು, ವಿದ್ಯಾರ್ಥಿಗಳು, ಮಧ್ಯಮವರ್ಗದವರಿಗೆ ಹಾಗೂ ತುರ್ತು ಕೆಲಸಕ್ಕೆ ತೆರಳುವವರಿಗೆ, ಬಡವರಿಗೆ ಸಮಸ್ಯೆಯಾಗಿದ್ದು, ಅವರಿಗೆ ಅನುಕೂಲ ಕಲ್ಪಿಸಲು ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ 25 ಆಟೋ, ಎರಡು ಟೆಂಪೋಗಳಿಂದ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ವೀರಶೈವ ನಿತ್ಯಾನ್ನ ದಾಸೋಹ ಸೇವಾ ಸಮಿತಿಯಿಂದ 25 ಆಟೋ ಮತ್ತು ಎರಡು ಟೆಂಪೋ ಟ್ರಾವೆಲರ್ ಮೂಲಕ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ, ದೊಡ್ಡಗೊಲ್ಲರಹಟ್ಟಿ, ಸುಂಕದಕಟ್ಟೆ, ಹೌಸಿಂಗ್ ಬೋರ್ಡ್ ಟೋಲ್ಗೇಟ್, ಕೊಡಿಗೆಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರಿಗೆ ಸಿಬ್ಬಂದಿ ಮುಷ್ಕರ ಕೈಬಿಡುವವರೆಗೆ ಮಾತ್ರ ಉಚಿತ ಸೇವೆ ಇರುತ್ತದೆ ಎಂದು ಹೇಳಲಾಗಿದೆ.