
ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟದ ಪ್ರತಿಭಟನೆ ವೇಳೆ ಹಲವೆಡೆ ಗಲಾಟೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಗುಂಟೆ ಪೋಲಿಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.
ರ್ಯಾಪಿಡೋ ಸವಾರ ವಿಜಯಕುಮಾರ್ ಮೇಲೆ ಹಲ್ಲೆ ಮಾಡಿದ್ದ ಪುನೀತ್, ಮಣಿ, ಶರಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆ ವೇಳೆ ಬೈಕ್ ಮಾಡಿದ್ದ ಆರೋಪಿಗಳು ಬಳಿಕ ಬೈಕ್ ಸವಾರ ವಿಜಯಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ. ಸವಾರನ ಮುಖಕ್ಕೆ ಮೊಟ್ಟೆ ಒಡೆದು ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ಬಂಧಿಸಲಾಗಿದೆ.
ಖಾಸಗಿ ಸಾರಿಗೆ ಒಕ್ಕೂಟದ ಪ್ರತಿಭಟನೆ ವೇಳೆ ಹಲವೆಡೆ ಗಲಾಟೆಗಳು ನಡೆದಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧಡೆ 13 ಪ್ರಕರಣ ದಾಖಲಾಗಿದ್ದು, 12 ಜನರನ್ನು ಬಂಧಿಸಲಾಗಿದೆ.
ಕೇಂದ್ರ ವಿಭಾಗ 1, ಆಗ್ನೇಯ ವಿಭಾಗ 1, ಉತ್ತರ ವಿಭಾಗ ಹಾಗೂ ಈಶಾನ್ಯ ವಿಭಾಗ ತಲಾ 2, ಪಶ್ಚಿಮ ವಿಭಾಗದಲ್ಲಿ 7 ಕೇಸ್ ದಾಖಲಾಗಿವೆ. 13 ಕೇಸುಗಳಲ್ಲಿ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ.