ಬಿಲ್ಲಿಂಗ್ ಮತ್ತು ವಸೂಲಾತಿಗೆ ಸಂಬಂಧಿಸಿದ, ಮೋಸದ ಚಟುವಟಿಕೆಗಳನ್ನು ತಡೆಗಟ್ಟಲು ಅಸ್ತಿತ್ವದಲ್ಲಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯಲ್ಲಿ ಕೆಲವು ತಿದ್ದುಪಡಿಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೊಸ ನಿಯಮಗಳು ಜನವರಿ 1, 2022 ರಿಂದ ಜಾರಿಗೆ ಬರಲಿವೆ.
ತೆರಿಗೆ ವಿಧಿಸಬಹುದಾದ ಪೂರೈಕೆ, ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅರ್ಹತೆ, ಮೇಲ್ಮನವಿ ಸಲ್ಲಿಸಬೇಕಾದ ಸಂದರ್ಭಗಳಲ್ಲಿ ಅನುಸರಿಸಬೇಕಾದ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ.
ಹಣಕಾಸು ಕಾಯಿದೆ 2021 ರ ಭಾಗವಾಗಿ ಘೋಷಿಸಲಾದ ತಿದ್ದುಪಡಿಗಳು ಪರೋಕ್ಷ ತೆರಿಗೆ ನಿಯಮಗಳನ್ನು ಕಠಿಣಗೊಳಿಸುವ ಗುರಿಯನ್ನು ಹೊಂದಿವೆ. ಈ ಬದಲಾವಣೆಯಿಂದ ಗ್ರಾಹಕರಿಗೆ ಯಾವುದೇ ತೊಂದರೆಯಿಲ್ಲ.
ಹೊಸ ತಿದ್ದುಪಡಿಗಳಲ್ಲಿ ಒಂದಾದ ತೆರಿಗೆ ಹೊಣೆಗಾರಿಕೆ ಮತ್ತು ಅಗತ್ಯ ನಮೂನೆಗಳಲ್ಲಿ ನಮೂದಿಸಲಾದ ಮಾರಾಟಗಳ ನಡುವೆ ಹೊಂದಾಣಿಕೆಯಿಲ್ಲದಿದ್ದರೆ ಘಟಕಗಳ ವಿರುದ್ಧ ನೇರವಾಗಿ ಕ್ರಮ ಕೈಗೊಳ್ಳಲು ತನ್ನ ವಸೂಲಾತಿ ಅಧಿಕಾರಿಗಳನ್ನು ಕಳುಹಿಸಲು ಅನುಮತಿ ನೀಡಿದೆ. ಈಗಿನ ನಿಯಮಾವಳಿ ಪ್ರಕಾರ, ಕ್ರಮ ಆರಂಭಿಸುವ ಮುನ್ನ ಶೋಕಾಸ್ ನೋಟಿಸ್ ನೀಡಲಾಗುತ್ತದೆ.
ಪ್ರಸ್ತುತ GST ಆಡಳಿತದ ಅಡಿಯಲ್ಲಿ, ವಾರ್ಷಿಕ ವಹಿವಾಟು 5 ಕೋಟಿ ರೂ.ಗಿಂತ ಹೆಚ್ಚಿದ್ದರೆ ಕಂಪನಿಯು ಸಲ್ಲಿಸಬೇಕಾದ ಎರಡು ಮಾಸಿಕ ರಿಟರ್ನ್ಸ್ GSTR-1 ಮತ್ತು GSTR-3B ಇವೆ.
GSTR-1 ಮಾರಾಟದ ಇನ್‌ವಾಯ್ಸ್‌ಗಳನ್ನು ತೋರಿಸುವ ರಿಟರ್ನ್ ಆಗಿದ್ದರೆ, GSTR-3B ಪ್ರತಿ ತಿಂಗಳು ಸಲ್ಲಿಸಿದ ಸ್ವಯಂ ಘೋಷಿತ ಸಾರಾಂಶ GST ರಿಟರ್ನ್ ಆಗಿದೆ. ಆದ್ದರಿಂದ, GSTR-3B ಮತ್ತು GSTR-1 ಫಾರ್ಮ್‌ಗಳ ನಡುವೆ ಯಾವುದೇ ಹೊಂದಾಣಿಕೆಯಿಲ್ಲ ಎಂದು ವ್ಯವಹಾರಗಳು ಖಚಿತಪಡಿಸಿಕೊಳ್ಳಬೇಕು.
ಹೊಂದಾಣಿಕೆಯಾಗದಿದ್ದಲ್ಲಿ, ತೆರಿಗೆ ಪಾವತಿಸದ ಮಾರಾಟದ ಮೊತ್ತಕ್ಕೆ ಜಿ.ಎಸ್.ಟಿ.ಯನ್ನು ಮರುಪಡೆಯಲು, ಆ ವ್ಯಕ್ತಿ ಆವರಣಕ್ಕೆ ಅಧಿಕಾರಿಗಳನ್ನು ಕಳುಹಿಸಲು ಅಧಿಕಾರ ನೀಡಲಾಗಿದೆ ಹೊಸ ನಿಯಮದ ಪ್ರಕಾರ ವಸೂಲಾತಿಗೆ ಯಾವುದೇ ಸೂಚನೆ ನೀಡಬೇಕಾಗಿಲ್ಲ.