alex Certify BIG NEWS: ಬೀದಿನಾಯಿಗಳ ದಾಳಿಗೆ 5 ಮೇಕೆಗಳು ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೀದಿನಾಯಿಗಳ ದಾಳಿಗೆ 5 ಮೇಕೆಗಳು ಬಲಿ

ಬೆಳಗಾವಿ: ಬೀದಿನಾಯಿಗಳು ಮಕ್ಕಳು, ಹಿರಿಯರ ಮೇಲೆ ಮಾತ್ರವಲ್ಲ, ದನ ಕರು, ಕುರಿ, ಮೇಕೆಗಳ ಮೇಲೂ ದಾಳಿ ನಡೆಸಿದ್ದು, ಬೀದಿನಾಯಿಗಳ ದಾಳಿಗೆ ಐದು ಮೇಕೆಗಳು ಬಲಿಯಾಗಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಬೇಡಕಿಹಾಳ ಗ್ರಾಮದ ಹೊರವಲಯದ ತೋಟದಲ್ಲಿ ಈ ಘಟನೆ ನಡೆದಿದ್ದು, ಮಹಾದೇವ ಮೋಹಿತೆ ಎಂಬುವವರಿಗೆ ಸೇರಿದ 5 ಮೇಕೆಗಳು ಸಾವನ್ನಪ್ಪಿವೆ.

ಕುಟುಂಬ ಸಮೇತ ಮಹಾದೇವ ಮೋಹಿತೆ ಊರಿಗೆ ತೆರಳಿದ್ದರು. ಈ ವೇಳೆ ಬೀದಿನಾಯಿಗಳು ಮೇಕೆಗಳ ಮೇಲೆ ದಾಳಿ ನಡೆಸಿ, ಕೊಂದು ಹಾಕಿವೆ. ಈ ಭಾಗದ ಜನರು ಬಿಡಾಡಿ ನಾಯಿಗಳ ಹಾವಳಿಯಿಂದ ಬೇಸತ್ತಿದ್ದು, ಬೀದಿನಾಯಿಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಹಿಂದೆಯೂ ಬೀದಿನಾಯಿಗಳು ದನ-ಕರುಗಳ ಮೇಲೆ ದಾಳಿ ನಡೆಸಿದ್ದವು. ಇದೀಗ ಮೇಕೆಗಳನ್ನೇ ಬಲಿ ಪಡೆದಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...