
ಇತ್ತೀಚಿಗಷ್ಟೇ ತನ್ನ ಟೀಸರ್ ಮೂಲಕ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ಬಿ ವಿ ಶೃಂಗಾ ನಟನೆಯ ‘ಚಿಲ್ಲಿ ಚಿಕನ್’ ಚಿತ್ರದ ”ಬೀದಿ ನಾಯಿ” ಎಂಬ ಹಾಡು ಇದೇ ಮೇ 29ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
ಪ್ರತೀಕ್ ಪ್ರಜೋಶ್ ನಿರ್ದೇಶನದ ಈ ಚಿತ್ರದಲ್ಲಿ ಬಿ ವಿ ಶೃಂಗಾ, ಬಿಜೌ ತಂಗ್ಜಮ್, ಜಿಂಪಾ, ಹಿರಾಕ್, ರಿನಿ, ನಿತ್ಯಶ್ರೀ, ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಮೆಟನೋಯಾ ಸ್ಟುಡಿಯೋಸ್ ಬ್ಯಾನರ್ ನಲ್ಲಿ ದೀಪ್ ಭೀಮಾಜಿಯಾನಿ ಮತ್ತು ಸುಧಾ ನಂಬಿಯಾರ್ ಜಂಟಿಯಾಗಿ ನಿರ್ಮಾಣ ಮಾಡಿದ್ದು, ಸಿದ್ದಾರ್ಥ್ ಸುಂದರ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
